ಮೊಸರಿನಲ್ಲಿರುವ ಹೆಚ್ಚಿನ ಪ್ರೊಟೀನ್, ವಿಟಮಿನ್ ಮತ್ತು ಮಿನರಲ್‌ಗಳು ನಿಮ್ಮ ತ್ವಚೆಯನ್ನು ತಾಜಾ ಆಗಿರಿಸುವಲ್ಲಿ ಹೆಚ್ಚು ಮಹತ್ವದ ಪಾತ್ರವನ್ನು ವಹಿಸುತ್ತದೆ. ಮೊಡವೆ, ಕಪ್ಪು ಕಲೆಗಳು, ಗುಳ್ಳೆಗಳು ಹೀಗೆ ಹಲವು ರೀತಿಯ ಸಮಸ್ಯೆಗಳನ್ನು ದೂರಮಾಡುತ್ತದೆ ಮತ್ತು ನಿಮ್ಮ ಮುಖವನ್ನು ಮಾಯಿಶ್ಚರೈಸ್ ಮಾಡುತ್ತದೆ ಮತ್ತು ದೀರ್ಘ ಸಮಯದವರೆಗೆ ಹೈಡ್ರೇಟ್ ಆಗಿ ಇರಿಸುತ್ತದೆ
ಬೇವು ಮೊಸರಿನ ಪ್ಯಾಕ್
- 8 ಬೇವಿನ ಎಲೆಗಳನ್ನು ಮೊಸರಿನ ಜೊತೆಗೆ ಸೇರಿಸಿ ರುಬ್ಬಿ ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದು ಮುಖದ ಧೂಳು-ಕೊಳೆಯನ್ನು ಹೋಗಲಾಡಿಸುತ್ತದೆ.
ಕಡಲೆಹಿಟ್ಟು ಮೊಸರ ಪ್ಯಾಕ್
- ಕಡಲೆಹಿಟ್ಟು, ಮೊಸರನ್ನು ಸೇರಿಸಿ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷದ ವರೆಗೆ ಸ್ಕ್ರಬ್ ಮಾಡುತ್ತಿರಿ. ನಂತರ ನೀರಿನಿಂದ ತೊಳೆಯಿರಿ.
ಟೊಮ್ಯಾಟೋ ಮೊಸರಿನ ಪ್ಯಾಕ್
- ಚೆನ್ನಾಗಿ ಪೇಸ್ಟ್ ಮಾಡಿದ ಟೊಮ್ಯಾಟೋಗೆ ಸ್ವಲ್ಪ ಮೊಸರು ಸೇರಿಸಿ. ಒಂದೆರಡು ಹನಿ ರೋಸ್ ವಾಟರ್ ಸೇರಿಸಿ ಮುಖಕ್ಕೆ ಈ ಮಿಶ್ರಣ ಹಚ್ಚಿ. 15 ನಿಮಿಷ ಬಿಟ್ಟು ತೊಳೆಯಿರಿ.