ಸುಂದರ ತ್ವಚೆಗಾಗಿ ಮನೆಯಲ್ಲಿಯೇ ತಯಾರಿಸಿ ರೋಸ್ ವಾಟರ್..!!

ಗುರುವಾರ, 23 ಆಗಸ್ಟ್ 2018 (18:23 IST)
ಸೌಂದರ್ಯವರ್ಧಕಗಳನ್ನು ಬಳಸುವ ಮೂಲಕ ಸೌಂದರ್ಯವನ್ನು ಹೆಚ್ಚಿಸಕೊಳ್ಳಬಹುದು, ಅದರೆ ಈ ಸೌಂದರ್ಯವರ್ಧಕಗಳಲ್ಲಿ ಕೆಲವೊಂದು ನೈಸರ್ಗಿಕವಾಗಿದ್ದರೆ ಇನ್ನು ಕೆಲವು ರಾಸಾಯನಿಕವಾಗಿರುತ್ತವೆ. ಸೌಂದರ್ಯವನ್ನು ವದ್ಧಿಗೊಳಿಸಿ, ತ್ವಚೆಯನ್ನು ಕೋಮಲವಾಗಿರಿಸುವ ಅದ್ಭುತ ಶಕ್ತಿ ರೋಸ್‌ ವಾಟರ್‌ಗಿದೆ. ರೋಸೇಸಿ, ಇಸಬು (ಎಸ್ಜಿಮಾ ) ಮತ್ತು ಶುಷ್ಕತೆಯಂತಹ ಚರ್ಮದ ಕಿರಿಕಿರಿಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
ಇದನ್ನು ಫೇಸ್ ಕ್ಲೆನ್ಲರ್, ಮೊಡವೆ ನಿವಾರಣೆ ಮಾಡಲು, ಕೂದಲಿನ ಕಂಡೀಶನರ್‌ನಂತೆ, ಕಣ್ಣಿನ ಆರೈಕೆಗೆ, ಟೋನರ್‌ನಂತೆ, ಒಣಚರ್ಮದ ಸಮಸ್ಯೆಯನ್ನು ಕಡಿಮೆ ಮಾಡಲು ಬಳಸಬಹುದು. ಇದಲ್ಲದೆ, ಇದು ಚರ್ಮದ pH ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
 
ಬನ್ನಿ ಮನೆಯಲ್ಲಿಯೇ ರೋಸ್ ವಾಟರ್ ತಯಾರಿಸುವುದು ಹೇಗೆ ಎಂದು ನೋಡೋಣ -
 
ಮಾಡುವ ವಿಧಾನ
 
* ತಾಜಾ ಗುಲಾಬಿ ಹೂವುಗಳನ್ನು ಸ್ವಚ್ಛಗೊಳಿಸಿ.
 
* ಒಂದು ನೀರನ್ನು ಪಾತ್ರೆಯನ್ನು ಬಿಸಿ ಮಾಡಿ ಅದಕ್ಕೆ ತಾಜಾ ಸ್ವಚ್ಛಗೊಳಿಸಿದ ಗುಲಾಬಿ ದಳಗಳನ್ನು ಹಾಕಿ.
 
* ಈ ಪಾತ್ರೆಯನ್ನು ಮುಚ್ಚಿಟ್ಟು, 10-15 ನಿಮಿಷಗಳವರೆಗೆ ಕಡಿಮೆ ಉರಿಯಲ್ಲಿ ಬಿಸಿ ಮಾಡಬೇಕು.
 
* ಗುಲಾಬಿ ದಳಗಳ ಬಣ್ಣ ಬದಲಾದ ನಂತರ, ಪಾತ್ರೆಯನ್ನು ಒಲೆಯಿಂದ ಕೆಳಗಿಳಿಸಿ, ತಣ್ಣಗಾಗಲು ಬಿಡಬೇಕು.
 
* ತಣ್ಣಗಾದ ನಂತರ ನೀರನ್ನು ಸೋಸಿ, ಆ ನೀರನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ಮುಚ್ಚಿ, ಫ್ರಿಜ್‌ನಲ್ಲಿ ಒಂದು ದಿನ ಇಡಬೇಕು.
 
* ಈ ನೀರನ್ನು ಸೌಂದರ್ಯವರ್ಧಕವಾಗಿ ಮುಖಕ್ಕೆ ಹಾಗು ಕೂದಲಿಗೆ ಹಚ್ಚಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ