ಬೆಂಗಳೂರು: ಹೋಲಿ ಹಬ್ಬ ಇನ್ನೇನು ಬಂದೇ ಬಿಟ್ಟಿತು. ಹೋಲಿ ಎಂದಾಕ್ಷಣ ಬಣ್ಣದ ಓಕುಳಿ ಇದ್ದೇ ಇರುತ್ತದೆ. ಬಣ್ಣದ ನೀರು ಕೆಲವೊಮ್ಮೆ ಚರ್ಮ, ಕೂದಲುಗಳಿಗೆ ಹಾನಿ ಮಾಡಬಹುದು. ಇದರಿಂದ ರಕ್ಷಿಸಿಕೊಳ್ಳಲು ಕೆಲವು ಟಿಪ್ಸ್ ಇಲ್ಲಿದೆ ನೋಡಿ.
· ಬಣ್ಣದ ಓಕುಳಿ ಆಡುವ ಮೊದಲು ಮತ್ತು ನಂತರ ಚರ್ಮಕ್ಕೆ ಉತ್ತಮ ಸನ್ ಸ್ಕ್ರೀನ್ ಮತ್ತು ತೇವಾಂಶದ ಕ್ರೀಂ ಬಳಸಿ.
· ಮುಖ ಮತ್ತು ದೇಹದ ಭಾಗಗಳಿಗೆ ವ್ಯಾಸಲಿನ್, ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಳ್ಳಿ.
· ಓಕುಳಿ ಆಡುವ ಮೊದಲು ಕೂದಲುಗಳಿಗೆ ಕೊಬ್ಬರಿ ಎಣ್ಣೆ, ಹರಳೆಣ್ಣೆ ಹಚ್ಚಿಕೊಳ್ಳಿ.
· ತಲೆಗೆ ಸ್ಕಾರ್ಫ್ ಕಟ್ಟಿಕೊಂಡು ಕೂದಲು ರಕ್ಷಿಸಿಕೊಳ್ಳಬಹುದು.
· ತುಟಿಗಳಿಗೆ ಗಾಢವಾಗಿ ಲಿಪ್ ಬಾಮ್ ಹಚ್ಚಿಕೊಳ್ಳಿ.
· ಉದ್ದ ಕೈ ಅಂಗಿ ತೊಟ್ಟುಕೊಂಡು ಬಣ್ಣದ ಓಕುಳಿ ಆಡಿ.
· ತೀರಾ ಸ್ಕಿನ್ ಅಲರ್ಜಿ ಆದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ