ಟಚ್ ಸ್ಕ್ರೀನ್ ಮೊಬೈಲ್ ಬಳಸುವ ಮಕ್ಕಳಿಗೆ ಈ ಅಪಾಯ ತಪ್ಪಿದ್ದಲ್ಲ!

ಬುಧವಾರ, 28 ಫೆಬ್ರವರಿ 2018 (08:16 IST)
ಬೆಂಗಳೂರು: ಇಂದಿನ ಮಕ್ಕಳಿಗೆ ಟಚ್ ಸ್ಕ್ರೀನ್ ಮೊಬೈಲ್ ಆಪರೇಟ್ ಮಾಡುವುದು, ಅದರಲ್ಲಿ ಗೇಮ್ಸ್ ಆಡುತ್ತಿರುವುದು ಮಾಡಲು ಹೆಚ್ಚು ಇಷ್ಟ. ಆದರೆ ಚಿಕ್ಕ ಮಕ್ಕಳು ಈ ಮೊಬೈಲ್ ಬಳಸುವುದರಿಂದ ಈ ಅಪಾಯ ತಪ್ಪಿದ್ದಲ್ಲ!
 

ಹೆಚ್ಚಾಗಿ ಟಚ್ ಸ್ಕ್ರೀನ್ ಮೊಬೈಲ್ ನಲ್ಲಿ ಕೈಯಾಡಿಸುತ್ತಿರುವ ಮಕ್ಕಳಿಗೆ ಪೆನ್ಸಿಲ್ ಸರಿಯಾದ ರೀತಿಯಲ್ಲಿ ಹಿಡಿಯಲೂ ಕಷ್ಟವಾಗಬಹುದು ಎಂದು ಹೊಸ ಅಧ್ಯಯನ ವರದಿಯೊಂದು ಹೇಳಿದೆ.

ಸದಾ ಮೊಬೈಲ್, ಟ್ಯಾಬ್ ನಂತ ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಕೈಯಾಡಿಸುತ್ತಿರುವ ಮಕ್ಕಳ ಬೆರಳುಗಳ ಮಾಂಸಖಂಡಗಳ ಬೆಳವಣಿಗೆ ಕುಂಠಿತವಾಗುತ್ತದೆ. ಪರಿಣಾಮ ಪೆನ್ಸಿಲ್ ಹಿಡಿಯಲೂ ಕಷ್ಟವಾಗುತ್ತದೆ ಎಂದು ಬ್ರಿಟನ್ ನ ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ