ಕಣ್ಣಿನ ಸುತ್ತವಿರುವ ಡಾರ್ಕ್ ಸರ್ಕಲ್ ಕಡಿಮೆ ಮಾಡಲು ಇದನ್ನೊಮ್ಮೆ ಪ್ರಯತ್ನಿಸಿ ನೋಡಿ
ಬುಧವಾರ, 22 ಆಗಸ್ಟ್ 2018 (15:32 IST)
ಬೆಂಗಳೂರು: ಕಣ್ಣಿನ ಸುತ್ತ ಮೂಡುವ ಈ ಕಪ್ಪು ವರ್ತುಲ ಮುಖದ ಸೌಂದರ್ಯವನ್ನೇ ಹಾಳು ಮಾಡಿ ಬಿಡುತ್ತದೆ. ಹೆಣ್ಣುಮಕ್ಕಳೂ ಮಾತ್ರವಲ್ಲ, ಹುಡುಗರು ಕೂಡ ಈ ಸಮಸ್ಯೆಯನ್ನು ಎದುರಿಸುತ್ತಾರೆ. ಇದಕ್ಕೆ ಕಾರಣವು ಹಲವು ಇದ್ದಿರಬಹುದು. ಪರಿಹಾರ ಇಲ್ಲಿದೆ ನೋಡಿ.
ಬಾದಾಮಿಎಣ್ಣೆ: ಮಲಗುವ ಮುನ್ನ ಸ್ವಲ್ಪ ಬಾದಾಮಿ ಎಣ್ಣೆಯನ್ನು ಕಣ್ಣಿನ ಸುತ್ತ ಹಚ್ಚಿ ಸ್ವಲ್ಪ ಮಸಾಜ್ ಮಾಡಿ. ಬೆಳಿಗ್ಗೆ ಎದ್ದು ಮುಖವನ್ನು ತಂಪಾದ ನೀರಿನಿಂದ ತೊಳೆಯಿರಿ.
ಸೌತೆಕಾಯಿ: ಸೌವತೆಕಾಯಿ ಕತ್ತರಿಸಿ ಅದನ್ನು 10 ನಿಮಿಷಗಳ ಕಾಲ ಕಣ್ಣುಗಳ ಮೇಲೆ ಇಡಿ. ನಂತರ ಸಾಮಾನ್ಯ ನೀರಿನಿಂದ ಮುಖ ತೊಳೆಯಿರಿ. ಈ ವಿಧಾನ ಕೇವಲ ಕಪ್ಪು ಕಲೆ ತೆಗೆಯುವುದಲ್ಲದೇ ಕಣ್ಣಿಗೆ ಆರಾಮವನ್ನೂ ನೀಡುತ್ತದೆ.
ಟೊಮ್ಯಾಟೋ: ಕಪ್ಪು ಕಲೆಗಳಿಗೆ ಟೊಮ್ಯಾಟೋ ಉತ್ತಮ ಪರಿಹಾರ. ಸ್ವಲ್ಪ ಟೊಮ್ಯಾಟೋ ಜ್ಯೂಸ್ಗೆ ಒಂದು ಚಮಚ ನಿಂಬೆ ರಸವನ್ನು ಸೇರಿಸಿ ಕಣ್ಣಿನ ಸುತ್ತ ಹಚ್ಚಿ. 10 ನಿಮಿಷದ ನಂತರ ನೀರಿನಿಂದ ತೊಳೆಯಿರಿ. ಇದನ್ನು ದಿನಕ್ಕೆ 2 ಬಾರಿ ಆದರೂ ಮಾಡಿ.
ಬಟಾಟೆ: ಒಂದು ಅಥವಾ 2 ಬಟಾಟೆಯನ್ನು ತುರಿದು ಅದರ ರಸ ತೆಗೆದು ಕಣ್ಣಿನ ಸುತ್ತ ಹಚ್ಚಿಕೊಳ್ಳಿ. ಹತ್ತು ನಿಮಿಷದ ನಂತರ ನೀರಿನಿಂದ ತೊಳೆಯಿರಿ. ಇದನ್ನು ದಿನಕ್ಕೆ 2 ಬಾರಿಯಂತೆ ಮಾಡುತ್ತಾ ಬಂದರೆ ಕಲೆ ನಿವಾರಣೆಯಾಗುತ್ತದೆ.
ರೋಸ್ ವಾಟರ್: ರೋಸ್ ವಾಟರ್ ಸ್ಕಿನ್ ಟೋನರ್ ಆಗಿ ಕೆಲಸ ಮಾಡುತ್ತದೆ. ಹತ್ತಿಯನ್ನು ರೋಸ್ ವಾಟರ್ನಲ್ಲಿ ಅದ್ದಿ, ಕಣ್ಣಿನ ಮೇಲೆ ಇಡಿ. ಪ್ರತಿನಿತ್ಯ ಎರಡು ಬಾರಿ ಹೀಗೆ ಮಾಡುವುದರಿಂದ ಕಪ್ಪು ಕಲೆ ಮಾಯವಾಗುತ್ತದೆ.
ಕಿತ್ತಳೆರಸ: ಕಿತ್ತಳೆ ರಸಕ್ಕೆ, ಒಂದೆರಡು ಹನಿ ಗ್ಲಿಸರಿನ್ ಸೇರಿಸಿ ಕಣ್ಣಿನ ಸುತ್ತ ಹಚ್ಚಿ. ಇದು ಕಪ್ಪು ಕಲೆ ನಿವಾರಿಸುವುದಲ್ಲದೆ, ಕಣ್ಣಿನ ಸುತ್ತ ನೈಸರ್ಗಿಕವಾಗಿಯೇ ಕಾಂತಿ ನೀಡುತ್ತದೆ.