ಮಶ್ರೂಮ್ ತಿಂದರೆ ವಯಸ್ಸಾಗಿದ್ದೇ ಗೊತ್ತಾಗಲ್ವಂತೆ!

ಭಾನುವಾರ, 21 ಜನವರಿ 2018 (09:14 IST)
ಬೆಂಗಳೂರು: ಮಶ್ರೂಮ್ ಕರಿ ಎಂದರೆ ನಿಮಗೆ ಇಷ್ಟವೇ? ಹಾಗಿದ್ದರೆ ಇನ್ನು ಹೆಚ್ಚು ಹೆಚ್ಚು ತಿನ್ನಿ! ಯಾಕೆಂದರೆ ಇದರ ಸೇವನೆಯಿಂದ ಚರ್ಮಕ್ಕಾಗುವ ಲಾಭ ಅಪಾರ. ಅದರಲ್ಲೂ ವಿಶೇಷವಾಗಿ ಇದನ್ನು ಸೇವಿಸುತ್ತಿದ್ದರೆ ವಯಸ್ಸಾಗಿದ್ದೇ ಗೊತ್ತಾಗಲ್ವಂತೆ!
 

ಇದರಲ್ಲಿ ವಿಟಮಿನ್ ಬಿ ಅಂಶ ಹೇರಳವಾಗಿದ್ದು, ಆತಂಕ,  ಒತ್ತಡ ಹತ್ತಿರವೂ ಸುಳಿಯದಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲ, ಇದರಲ್ಲಿರುವ ಪೋಷಕಾಂಶಗಳು ಚರ್ಮಕ್ಕೆ ಕಾಂತಿ ಒದಗಿಸುತ್ತವೆ.

ಇದು ಚರ್ಮದ ತೇವಾಂಶವನ್ನು ಉಳಿಸುತ್ತದೆ. ಇದರಲ್ಲಿರುವ ಪೋಷಕಾಂಶ ನಿಮ್ಮ ಚರ್ಮವು ಅವಧಿಗೆ ಮೊದಲೇ ಸುಕ್ಕುಗಟ್ಟದಂತೆ ನೋಡಿಕೊಳ್ಳುತ್ತದೆ. ಸಾಮಾನ್ಯವಾಗಿ ನಾವು ಅಂಗಡಿಯಿಂದ ಖರೀದಿಸುವ ಚರ್ಮದ ಲೋಷನ್, ಕ್ರೀಮ್ ಗಳು ಕೊಡುವ ಲಾಭ ಮಶ್ರೂಮ್ ನಿಂದಲೇ ಸಿಗುತ್ತದೆಯಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ