ಪ್ರೆಗ್ನೆನ್ಸಿಗೆ ಪ್ರಯತ್ನ ಮಾಡುತ್ತಿದ್ದೀರಾ? ವೀರ್ಯಾಣುವಿನ ಆಯಸ್ಸು ತಿಳಿಯಿರಿ!

ಭಾನುವಾರ, 21 ಜನವರಿ 2018 (09:10 IST)
ಬೆಂಗಳೂರು: ಮಗುವಾಗಬೇಕೆಂಬ ಬಯಕೆ ಹೊಂದಿರುವ ದಂಪತಿಗೆ ಮಿಲನ ಕ್ರಿಯೆ ಬಗ್ಗೆ ಹಲವು ಅನುಮಾನಗಳಿರುತ್ತವೆ. ಅದರಲ್ಲೂ ವೀರ್ಯಾಣುವಿನ ಆಯಸ್ಸು ಎಷ್ಟು ಎಂಬ ಅನುಮಾನಗಳಿರಬಹುದು. ಅದಕ್ಕೆ ಇಲ್ಲಿ ಉತ್ತರವಿದೆ ನೋಡಿ.
 

ಒಮ್ಮೆ ಮಿಲನಕ್ರಿಯೆ ನಡೆಸಿದ ನಂತರ ಕೆಲವು ವೀರ್ಯಾಣು 1 ರಿಂದ 2 ದಿನದೊಳಗೆ ನಾಶವಾಗುತ್ತವೆ. ಕೆಲವೊಂದು ಮಾತ್ರ 5 ದಿನಗಳವರೆಗೂ ಜೀವಿಸಬಲ್ಲವು.

ಹೀಗಾಗಿ ಗರ್ಭಿಣಿಯಾಗಬೇಕೆಂದು ಬಯಸುವ ಮಹಿಳೆ ಪ್ರತಿ ನಿತ್ಯ ಮಿಲನಕ್ರಿಯೆಯಲ್ಲಿ ತೊಡಗಬೇಕೆಂದಿಲ್ಲ. ಹಲವಾರು ಅಧ್ಯಯನಗಳಿಂದಲೂ ಇದು ದೃಢಪಟ್ಟಿದೆ. ಅಂಡಾಣು ಬಿಡುಗಡೆಯಾಗುವ ಎರಡು ದಿನ ಮೊದಲು ಮಿಲನ ಕ್ರಿಯೆ ನಡೆಸಿರುವುದರಿಂದಲೂ ಪ್ರೆಗ್ನೆಂಟ್ ಆದ ಹೆಚ್ಚು ಉದಾಹರಣೆಗಳಿವೆ ಎಂದು ತಜ್ಞರು ಕಂಡುಕೊಂಡಿದ್ದಾರೆ. ಸುದೀರ್ಘ ಕಾಲ ಜೀವಿತಾವಧಿ ಹೊಂದಿರುವ ಅಂದರೆ ನಾಲ್ಕರಿಂದ ಐದು ದಿನಗಳವರೆಗೆ ನೆಲೆ ನಿಲ್ಲಬಲ್ಲ ವೀರ್ಯಾಣು ಅಂಡಾಣು ಪ್ರವೇಶಿಸಿ ಪ್ರೆಗ್ನೆನ್ಸಿಗೆ ಕಾರಣವಾಗುತ್ತವೆ ಎಂದು ಸಂಶೋಧಕರು ಹೇಳುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ