ಸಿಸೇರಿಯನ್ ಹೆರಿಗೆ ಬಗ್ಗೆ ಈ ತಪ್ಪು ಅಭಿಪ್ರಾಯ ಬಿಡಿ!

ಶನಿವಾರ, 20 ಜನವರಿ 2018 (08:14 IST)
ಬೆಂಗಳೂರು: ಸಿಸೇರಿಯನ್ ಹೆರಿಗೆ ಬಗ್ಗೆ ನಾವು ಹಲವರ ಅಭಿಪ್ರಾಯಗಳನ್ನು ಕೇಳಿದ್ದೇವೆ. ಸಿಸೇರಿಯನ್ ಹೆರಿಗೆ ನೋವು, ಪರಿಣಾಮಗಳ ಬಗ್ಗೆ ನಮ್ಮಲ್ಲಿ ಅನೇಕ ತಪ್ಪು ತಿಳುವಳಿಕೆಗಳಿವೆ. ಅವುಗಳು ಯಾವುವು ನೋಡೋಣ.
 

ಸಿಸೇರಿಯನ್ ಹೆರಿಗೆ ನೋವು ಕೊಡಲ್ಲ!
ಹೆಚ್ಚಿನವರಿಗೆ ಇರುವ ತಪ್ಪು ಕಲ್ಪನೆ ಇದುವೇ. ಹೆರಿಗೆ ಎನ್ನುವುದು ಮಹಿಳೆಯ ಜೀವನದ ಪ್ರಧಾಗ ಘಟ್ಟ. ಮತ್ತೊಂದು ಜೀವಕ್ಕೆ ಜೀವ ಕೊಡುವ ಈ ಪ್ರಕ್ರಿಯೆ ನಾರ್ಮಲ್ ಇರಲಿ, ಸಿಸೇರಿಯನ್ ಇರಲಿ ನೋವು ಇದ್ದೇ ಇರುತ್ತದೆ. ಶಸ್ತ್ರಿಚಿಕಿತ್ಸೆ ಸಂದರ್ಭದಲ್ಲಿ ನೋವು ಅನುಭವಕ್ಕೆ ಬಾರದಿದ್ದರೂ ಅನಸ್ತೇಷಿಯಾ ಪ್ರಭಾವ ಕಡಿಮೆಯಾದ ಮೇಲೆ ನೋವು ಅನುಭವಕ್ಕೆ ಬರುವುದು.

ಸಿಸೇರಿಯನ್ ಸುರಕ್ಷಿತವಲ್ಲ
ಸಿಸೇರಿಯನ್ ಹೆರಿಗೆಯೆಂದರೆ ಸುರಕ್ಷಿತವಲ್ಲ. ಇದರಲ್ಲಿ ಅಪಾಯಗಳು ಜಾಸ್ತಿ ಎಂಬುದು ತಪ್ಪು ಕಲ್ಪನೆ. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮಗುವನ್ನು ಸೇಫ್ ಆಗಿ ವೈದ್ಯರು ಹೊರ ಲೋಕಕ್ಕೆ ತರುತ್ತಾರೆ. ಹಾಗೆಯೇ ಅಮ್ಮನಿಗೂ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ.

ಮೊಲೆಯೂಡಿಸಲು ಆಗಲ್ಲ
ಸಿಸೇರಿಯನ್ ಹೆರಿಗೆ ಸಂದರ್ಭದಲ್ಲಿ ಲೋಕಲ್ ಅನಸ್ತೇಷಿಯಾ ನೀಡಲಾಗುತ್ತದೆ. ಹೀಗಾಗಿ ಮೊಲೆಯುಣಿಸಲು ಕಷ್ಟವಾಗದು.

ಮಗುವಿನ ಜತೆ ಆಪ್ತತೆ ಇರಲ್ಲ
ಇದಂತೂ ಸಂಪೂರ್ಣ ತಪ್ಪು ಕಲ್ಪನೆ. ಮಗು ಈ ಜಗತ್ತಿಗೆ ಹೇಗೆ ಬಂದರೂ ಅಮ್ಮ-ಮಗುವಿನ ಸಂಬಂಧ ಹಾಳಾಗಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ