ಹೊಟ್ಟೆ ಕರಗಬೇಕಾದರೆ ಯಾವ ಸಮಯದಲ್ಲಿ ಅನ್ನ ಊಟ ಮಾಡಬೇಕು?

ಶುಕ್ರವಾರ, 2 ಮಾರ್ಚ್ 2018 (08:32 IST)
ಬೆಂಗಳೂರು: ಹೆಚ್ಚಿನವರಿಗೆ ಅನ್ನ ಊಟ ಮಾಡುವುದರಿಂದ ಡಯಟ್ ಗೆ ಆಗಿ ಬರಲ್ಲ ಎಂಬ ತಪ್ಪು ಕಲ್ಪನೆಯಿದೆ. ಬೊಜ್ಜು ಕರಗಿಸಲು ಬಯಸುವವರು ಅನ್ನ ಸೇವಿಸಲೇಬಾರದೇ?

ಹಾಗೇನೂ ಇಲ್ಲ. ಹೊಟ್ಟೆಯ ಬೊಜ್ಜು ಅಥವಾ, ದೇಹದ ತೂಕ ಕಳೆದುಕೊಳ್ಳಬೇಕಾದರೆ ಅನ್ನ ಸೇವನೆಗೆ ಗುಡ್ ಬೈ ಹೇಳಬೇಕೆಂದಿಲ್ಲ. ಆದರೆ ಒಂದು ನಿರ್ದಿಷ್ಟ ಸಮಯದಲ್ಲಿ ಅನ್ನ ಸೇವಿಸಿದರೆ ಸಮಸ್ಯೆ ಇರದು.

ತಜ್ಞರ ಪ್ರಕಾರ ಅನ್ನ ಸೇವನೆಗೆ ಬೆಸ್ಟ್ ಟೈಮ್ ಎಂದರೆ ಮಧ್ಯಾಹ್ನದ ಭೋಜನ ಸಮಯ. ಹಗಲು ಹೊತ್ತಿನಲ್ಲಿ ದೇಹದ ಜೀರ್ಣ ಪ್ರಕ್ರಿಯೆ ಚುರುಕಾಗಿರುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ಅನ್ನ ಸೇವಿಸಿದರೆ ಯಾವುದೇ ಸಮಸ್ಯೆಯಾಗದು. ಅಷ್ಟೇ ಅಲ್ಲ, ಈ ಸಂದರ್ಭದಲ್ಲಿ ಹೆಚ್ಚು ಹಸಿವಾಗಿರುತ್ತಿತ್ತದೆ. ಹಾಗೆಯೇ ದೇಹಕ್ಕೆ ಹೆಚ್ಚು ಶಕ್ತಿಯ ಅಗತ್ಯವಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಅನ್ನ ಸೇವನೆ ಮಾಡಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ