ಬಿಳುಪಾದ ಹಲ್ಲು ನಿಮ್ಮದಾಗಬೇಕೆ…?

ಮಂಗಳವಾರ, 5 ಜೂನ್ 2018 (17:43 IST)
ಬೆಂಗಳೂರು: ಬಿಳುಪಾದ ಹಲ್ಲು ಎಂದರೆ ಎಲ್ಲರಿಗೂ ತುಂಬಾ ಇಷ್ಟ. ಹಲ್ಲು ಹಳದಿಯಾಗಿದ್ದರೆ ನಗುವುದಕ್ಕೂ ಮುಜುಗರವಾಗುತ್ತದೆ. ಮುಖದ ಅಂದದಷ್ಟೇ ಹಲ್ಲಿನ ಸ್ವಚ್ಛತೆಗೂ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಹಲ್ಲಿನ ಬಿಳುಪಿಗೆ ಇಲ್ಲಿದೆ ನೋಡಿ ಒಂದಷ್ಟು ಮನೆಮದ್ದು.


ಆ್ಯಪಲ್ ಸಿಡರ್‌ ವಿನೆಗರ್
ಸ್ವಲ್ಪ ಆ್ಯಪಲ್ ಸಿಡರ್‌ ವಿನೆಗರ್ ಅನ್ನು ಬ್ರಷ್‌ಗೆ ಹಾಕಿ ಹಲ್ಲು ತಿಕ್ಕಿ. ಈ ರೀತಿ ಮಾಡಿದರೆ ಹಲ್ಲು ಆಕರ್ಷಕವಾಗಿ ಕಾಣುವುದು.

ತೆಂಗಿನೆಣ್ಣೆ
ಒಂದು ಚಮಚ ತೆಂಗಿನೆಣ್ಣೆ ಬಾಯಿಗೆ ಹಾಕಿ 5 ನಿಮಿಷ ಬಾಯಿ ಮುಕ್ಕಳಿಸಬೇಕು. ಈ ರೀತಿ ಮಾಡಿದರೆ ಹಲ್ಲು ಬೆಳ್ಳಗಾಗುವುದರ ಜತೆಗೆ ಬಾಯಿ ದುರ್ವಾಸನೆ ಇಲ್ಲವಾಗುವುದು.

ನಿಂಬೆಹಣ್ಣಿನ ಸಿಪ್ಪೆ
ನಿಂಬೆಹಣ್ಣಿನ ಸಿಪ್ಪೆಯಿಂದ ಹಲ್ಲನ್ನು ತಿಕ್ಕಿದರೆ ಹಲ್ಲು ಬೆಳ್ಳಗಾಗುವುದು.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ