ಚಳಿಗಾಲದಲ್ಲಿ ಈ ವಸ್ತುಗಳನ್ನು ಬಳಸಲೇಬೇಡಿ ನಿಮ್ಮ ಮುಖ ಕಪ್ಪಾಗುತ್ತದೆ!

ಶನಿವಾರ, 10 ಫೆಬ್ರವರಿ 2018 (07:19 IST)
ಬೆಂಗಳೂರು : ಚಳಿಗಾಲದಲ್ಲಿ ಮುಖ ಡ್ರೈ ಮತ್ತು ರಫ್‌ ಆಗುತ್ತದೆ. ಈ ಸಮಯದಲ್ಲಿ ನಿಮ್ಮ ಮುಖದಲ್ಲಿ ಡ್ರೈನೆಸ್‌ ಹೆಚ್ಚುತ್ತದೆ. ಈ ಸಮಸ್ಯೆಗಳು ಬಾರದಿರಲು ಚಳಿಗಾಲದಲ್ಲಿ ಕೆಲವೊಂದು ವಸ್ತುಗಳನ್ನು ನೀವು ಅವಾಯ್ಡ್‌ ಮಾಡಬೇಕು. ಇಲ್ಲವಾದರೆ ಮುಖ ಕಪ್ಪಾಗುತ್ತದೆ.

*ಚಳಿಗಾಲದಲ್ಲಿ ಮುಖ ತುಂಬಾನೆ ಡ್ರೈ ಆಗುತ್ತದೆ. ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್‌ ಆಸಿಡ್‌ ಮುಖದ ಡ್ರೈನೆಸ್‌‌ನ್ನು ಇನ್ನಷ್ಟು ಹೆಚ್ಚುತ್ತದೆ. ಇದರಿಂದ ಮುಖದ ಹೊಳಪು ಕಡಿಮೆಯಾಗುತ್ತದೆ.

*ವಿನೆಗರ್‌ ನಲ್ಲಿ ಆಸಿಡ್‌ ಇರುತ್ತದೆ. ಇದನ್ನು ನೀರು ಇಲ್ಲದೆ ಮುಖಕ್ಕೆ ಹಚ್ಚಿದರೆ ಸ್ಕಿನ್‌ನ ಆಯಿಲ್‌ ಕಡಿಮೆಯಾಗುತ್ತದೆ. ಅಲ್ಲದೆ ಕಪ್ಪಾಗುತ್ತದೆ.

*ಕೆಲವು ಜನರು ಮುಖಕ್ಕೆ ಬಿಯರ್‌ ಫೇಸ್‌ಪ್ಯಾಕ್‌ ಹಚ್ಚಲು ಇಷ್ಟಪಡುತ್ತಾರೆ. ಬಿಯರ್‌ನ ಆಸಿಡಿಕ್‌ ನೇಚರ್‌ನಿಂದ ಸ್ಕಿನ್‌ ಡ್ರೈ ಆಗುತ್ತದೆ. ಇದನ್ನು ಪ್ರತಿದಿನ ಬಳಕೆ ಮಾಡುವುದರಿಂದ ಫೇರ್‌ನೆಸ್‌ ಕೂಡ ಕಡಿಮೆಯಾಗುತ್ತದೆ.

*ಬೇಕಿಂಗ್‌ ಸೋಡದಲ್ಲಿರುವ ಅಲ್ಕೆಲೈಡ್ಸ್‌‌ನಿಂದ ಸ್ಕಿನ್‌ನ ಪಿಎಚ್‌‌ ಲೆವೆಲ್‌ ಬ್ಯಾಲೆನ್ಸ್‌ ಆಗಿರುತ್ತದೆ. ಆದರೆ ಇದರಿಂದ ಸ್ಕಿನ್‌ನಲ್ಲಿ ಡಾರ್ಕ್‌ ಪ್ಯಾಚಸ್‌ ಉಂಟಾಗಿ ಪೇರ್‌ನೆಸ್‌ ಕಡಿಮೆಯಾಗುತ್ತದೆ.

*ಪುದೀನಾದಲ್ಲಿ ಮೆಂಥೋಲ್‌ ಇರುತ್ತದೆ. ಇದು ಚಳಿಗಾಲದಲ್ಲಿ ತೇವಾಂಶವನ್ನು ಹೀರಿಕೊಂಡು ಫೇರ್‌ನೆಸ್‌ ಕಡಿಮೆ ಮಾಡುತ್ತದೆ.

* ಕಿತ್ತಳೆ ಅಥವಾ ಅದರ ಸಿಪ್ಪೆಯಲ್ಲಿ ಸಿಟ್ರಿಕ್ ಆಸಿಡ್‌ ಇರುತ್ತದೆ. ಇದರಿಂದ ಸ್ಕಿನ್‌ ಕಳೆಗುಂದಿ ಅಂದ ಕೆಡುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ