ಕಿತ್ತಳೆ ಕರಾಮತ್ತು

ಶನಿವಾರ, 4 ಜನವರಿ 2014 (10:42 IST)
PR
ನಿಂಬೆಹಣ್ಣಿನ ಕುಲಕ್ಕೆ ಸೇರುವ ಕಿತ್ತಳೆ ಹಣ್ಣು ಬಹುಪಯೋಗಿ ಗುಣ ಹೊಂದಿದೆ. ಕಿತ್ತಳೆ ಮರದ ಎಲ್ಲಾ ಭಾಗಗಳು ಔಷಧೀಯ ಗುಣಗಳನ್ನು ಹೊಂದಿವೆ. ನಾನಾ ಕಾಯಿಲೆಗಳ ನಿವಾರಣೆಗೆ ಮನೆಯಲ್ಲೇ ಸುಲಭವಾಗಿ ತಯಾರು ಮಾಡುವಂತಹ ಔಷಧಗಳು ಇಲ್ಲಿವೆ. ತಲೆ ಹೊಟ್ಟಾಗುವಿಕೆ ಕಿತ್ತಳೆ ಹೂವುಗಳನ್ನು ತಲೆಗೆ ತಿಕ್ಕಬೇಕುತಾಜಾ ಸಿಪ್ಪೆಯನ್ನು ಮುಖಕ್ಕೆ ತಿಕ್ಕಿ 5 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದರೆ ಮುಖದ ಮೇಲಿನ ಮೊಡವೆ ಕಪ್ಪುಚುಕ್ಕಿಗಳು ನಿವಾರಣೆಯಾಗಿ ಮುಖದ ಕಾಂತಿ ಹೆಚ್ಚುತ್ತದೆ.

ತಲೆ ಕೂದಲು ಉದುರುವ ಸಮಸ್ಯೆ ಇದ್ದರೆ ಆರೆಂಜ್ ಪುಡಿಗೆ ಸ್ವಲ್ಪ ಮೊಸರು ಬಳಸಿ ಆ ಪ್ಯಾಕ್ ತಲೆಗೆ ಹಚ್ಚಿರಿ. ಅರ್ಧ ಗಂಟೆ ನಂತರ, ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ವೆಬ್ದುನಿಯಾವನ್ನು ಓದಿ