ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

Krishnaveni K

ಶನಿವಾರ, 27 ಏಪ್ರಿಲ್ 2024 (12:10 IST)
Photo Courtesy: Twitter
ಬೆಂಗಳೂರು: ನಮ್ಮ ಹಿತ್ತಲಲ್ಲಿ ಬೆಳೆಯುವ ಎಷ್ಟೋ ಹಣ್ಣುಗಳು ಮಾರಕ ರೋಗಗಳನ್ನೇ ನಿವಾರಿಸುವ ಶಕ್ತಿ ಹೊಂದಿರುತ್ತದೆ. ಅದರಲ್ಲಿ ಲಕ್ಷ್ಮಣ ಫಲವೂ ಒಂದು.

ಹೊರಗಿನಿಂದ ಒರಟಾಗಿ ಕಂಡರೂ ಒಳಗೆ ಸಿಹಿಯಾದ ತಿರುಳು ಇರುತ್ತದೆ. ರಾಮಫಲ, ಲಕ್ಷ್ಮಣ ಫಲ, ಸೀತಾಫಲ ಎಲ್ಲವೂ ಒಳಗೆ ಸಾಧಾರಣ ಒಂದೇ ರುಚಿ ಹೊಂದಿರುತ್ತದೆ. ಆದರೆ ಲಕ್ಷ್ಮಣ ಫಲದಲ್ಲಿ ಕ್ಯಾನ್ಸರ್ ರೋಗ ಬಾರದಂತೆ ತಡೆಯುವ ಸಾಮರ್ಥ್ಯವಿದೆ. ಸುಮಾರು 12 ವಿಧ ಕ್ಯಾನ್ಸರ್ ರೋಗಗಳನ್ನು ನಿವಾರಿಸುವ ಶಕ್ತಿ ಲಕ್ಷ್ಮಣ ಫಲದಲ್ಲಿದೆಯಂತೆ.

ಯಾವುದೇ ಅಡ್ಡಪರಿಣಾಮಗಳಿಲ್ಲದೇ ದೇಹದಲ್ಲಿ ಕ್ಯಾನ್ಸರ್ ಕಣಗಳನ್ನು ಕೊಲ್ಲುವ ಶಕ್ತಿ ಲಕ್ಷ್ಮಣ ಫಲದಲ್ಲಿದೆ. ಕ್ಯಾನ್ಸರ್ ರೋಗದ ಚಿಕಿತ್ಸೆಗಾಗಿ ಕೀಮೋಥೆರಪಿ ಮಾಡಿದಷ್ಟೇ ಫಲವನ್ನು ಇದರಲ್ಲಿಯೂ ಕಾಣಬಹುದು ಇದಷ್ಟೇ ಅಲ್ಲದೆ ಲಕ್ಷ್ಮಣ ಫಲ ಸೇವನೆಯಿಂದ ಇನ್ನೂ ಅನೇಕ ಉಪಯೋಗಳಿವೆ.

ಮೂತ್ರನಾಳದ ಸೋಂಕು ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಲಕ್ಷ್ಮಣ ಫಲ ಸೇವನೆಯಿಂದ ಮೂತ್ರನಾಳದ ಸೋಂಕನ್ನೂ ನಿವಾರಿಸಬಹುದು. ಲಕ್ಷ್ಮಣ ಫಲದಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿದ್ದು,  ಮೂತ್ರದಲ್ಲಿ ಅಸಿಡಿಕ್ ಅಂಶವನ್ನು ಸಮತೋಲನದಲ್ಲಿರಿಸುತ್ತದೆ. ಅಲ್ಲದೆ ಜೀರ್ಣಕ್ರಿಯೆ ಸುಗಮಗೊಳಿಸಲೂ ಲಕ್ಷ್ಮಣ ಫಲ ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ