ಬೆಂಗಳೂರು: ಸಾಮಾನ್ಯವಾಗಿ ನಾವು ಜೋಳ ಅಥವಾ ಕಾರ್ನ್ ಸೇವಿಸುವಾಗ ಅದರ ಜೊತೆಗಿರುವ ಸಿಲ್ಕಿ ಕೂದಲನ್ನು ಬಿಸಾಕಿಬಿಡುತ್ತೇವೆ. ಆದರೆ ಕೂದಲಿನ ರೀತಿಯಲ್ಲಿರುವ ಈ ಕಾರ್ನ್ ಸಿಲ್ಕ್ ನ ಆರೋಗ್ಯಕರ ಉಪಯೋಗಗಳು ಏನು ಗೊತ್ತಾ?
ಕಾರ್ನ್ ಸಿಲ್ಕ್ ನಲ್ಲಿ ಪೋಷಕಾಂಶಗಳು, ಪ್ರೊಟೀನ್ಸ್, ಕಾರ್ಬೋಹೈಡ್ರೇಟ್ ಅಂಶಗಳು, ವಿಟಮಿನ್, ಖನಿಜಾಂಶಗಳು ಮತ್ತು ಫೈಬರ್ ಅಂಶ ಹೇರಳವಾಗಿದೆ. ಇದರಲ್ಲಿ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಮಾಡುವ ಮತ್ತು ಉರಿಯೂತ ಕಡಿಮೆ ಮಾಡುವ ಗುಣವಿದ್ದು, ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ.
ಕಾರ್ನ್ ಸಿಲ್ಕ್ ನ ಅತ್ಯಂತ ಮುಖ್ಯ ಗುಣವೆಂದರೆ ನಿಮ್ಮ ಕಿಡ್ನಿಯ ಆರೋಗ್ಯ ಸಂರಕ್ಷಿಸುವುದು. ಮೂತ್ರಜನಕಾಂಗ ಮತ್ತು ಅದಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಗೆ ಕಾರ್ನ್ ಸಿಲ್ಕ್ ನ ಚಹಾ ಅತ್ಯುತ್ತಮ ಪರಿಹಾರ ನೀಡುತ್ತದೆ. ಕಾರ್ನ್ ಸಿಲ್ಕ್ ನ್ನು ಚೆನ್ನಾಗಿ ತೊಳೆದು ನೀರು ಹಾಕಿ ಚೆನ್ನಾಗಿ ಕುದಿಸಿದರೆ ಕಾರ್ನ್ ಸಿಲ್ಕ್ ಚಹಾ ಸಿದ್ಧವಾಗುತ್ತದೆ.
ಇದನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಮೂತ್ರಕೋಶದ ಸಮಸ್ಯೆಗಳು, ಮೂತ್ರಜನಕಾಂಗದ ಸಮಸ್ಯೆಗಳು, ಉರಿಮೂತ್ರ, ಮೂತ್ರದ ಸೋಂಕು ಇತ್ಯಾದಿ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಜೊತೆಗೆ ಮೂತ್ರಜನಕಾಂಗವನ್ನು ಆರೋಗ್ಯಯುತವಾಗಿ ಕಾಪಾಡುತ್ತದೆ.