ಮುಖದ ಮೇಲಿರುವ ಮೊಡವೆ ರಂದ್ರಗಳನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ
ಶನಿವಾರ, 8 ಡಿಸೆಂಬರ್ 2018 (07:20 IST)
ಬೆಂಗಳೂರು : ಮುಖದಲ್ಲಿ ಮೊಡವೆ ಆದ ನಂತರ ಅದರ ರಂಧ್ರಗಳು ಹಾಗೇ ಉಳಿಯುತ್ತದೆ. ಹೆಚ್ಚಿನವರಿಗೆ ಈ ಸಮಸ್ಯೆ ಇರುತ್ತದೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಇದನ್ನು ಈ ಮನೆಮದ್ದಿನಿಂದ ನಿವಾರಿಸಬಹುದು.
ಓಟ್ಸ್ ಪೌಡರ್ 1 ಟೇಬಲ್ ಸ್ಪೂನ್, ಮೊಸರು 1 ಟೇಬಲ್ ಸ್ಪೂನ್ , ನಿಂಬೆ ರಸ ½ ಟೇಬಲ್ ಸ್ಪೂನ್ ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಆಯಿಲ್ ಫೇಸ್ ನವರು ಈ ಮನೆಮದ್ದನ್ನು ವಾರದಲ್ಲಿ ಒಂದೇ ಬಾರಿ ಮಾಡಿ. ನಾರ್ಮಲ್ ಫೇಸ್ ನವರು 15ದಿನಕ್ಕೆ ಒಂದು ಬಾರಿ ಮಾಡಿ. ಹೀಗೆ 3-4 ತಿಂಗಳು ಮಾಡಿದರೆ ಮುಖದ ರಂಧ್ರಗಳು ಮಾಯವಾಗುತ್ತದೆ.
5 ಬಾದಾಮಿಯನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿ. ನಂತರ ಸಿಪ್ಪೆ ತೆಗೆದು ಪೇಸ್ಟ್ ಮಾಡೊಕೊಳ್ಳಿ. ಈ ಪೇಸ್ಟ್ ಗೆ 1 ಟೀ ಸ್ಪೂನ್ ನಿಂಬೆ ರಸ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದನ್ನು ಕೂಡ ಆಯಿಲ್ ಫೇಸ್ ನವರು ಈ ಮನೆಮದ್ದನ್ನು ವಾರದಲ್ಲಿ ಒಂದೇ ಬಾರಿ ಮಾಡಿ. ನಾರ್ಮಲ್ ಫೇಸ್ ನವರು 15ದಿನಕ್ಕೆ ಒಂದು ಬಾರಿ ಮಾಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.