ಕಲೆಗಳನ್ನು ಹೋಗಲಾಡಿಸಲು

ಶುಕ್ರವಾರ, 21 ನವೆಂಬರ್ 2014 (14:13 IST)
ಚರ್ಮದ ಮೇಲಿನ ಕಲೆಗಳನ್ನು ಹೋಗಲಾಡಿಸಲು ಬಟಾಣಿಯ ಹಿಟ್ಟನ್ನು ಬಳಸಬೇಕು. ಆ ಹಿಟ್ಟನ್ನು ಹಾಲಿನಲ್ಲಿ ಕಲೆಸಿ ತಿಕ್ಕುವುದರಿಂದ ಕಲೆಗಳು ಮಾಯವಾಗುವವು.
 
ವೀಳ್ಯದೆಲೆಯನ್ನು ನುಣ್ಣಗೆ ಅರೆದು ಕೊಬ್ಬರಿ ಎಣ್ಣೆಯಲ್ಲಿ ಕಲಸಿ ತಲೆಗೆ ಎರಡು ಮೂರು ದಿನ ಹಚ್ಚಿ ಸ್ನಾನ ಮಾಡಿದರೆ ತಲೆಯ ಕೂದಲು ಉದುರುವುದು ನಿಂತು ಹೋಗುತ್ತದೆ.
 
ನೀರಿಗೆ ಉಪ್ಪು ಬೆರೆಸಿ ಆ ನೀರಿನಿಂದ ತಲೆಯನ್ನು ತೊಳೆದುಕೊಂಡರೆ ತಲೆಯ ಹೊಟ್ಟಿನ ನಿವಾರಣೆಯಾಗುವುದು.
 
ಸೌತೆಕಾಯಿ ಹಚ್ಚಿ ಮುಖದ ಚರ್ಮದ ಮೇಲೆ ತಿಕ್ಕಿದರೆ ಮುಖ ಕಾಂತಿಯುಕ್ತವಾಗುತ್ತದೆ.
 

ವೆಬ್ದುನಿಯಾವನ್ನು ಓದಿ