ಕೂದಲು ಚೆನ್ನಾಗಿ ಬೆಳೆಯುಲು

ಶುಕ್ರವಾರ, 21 ನವೆಂಬರ್ 2014 (14:16 IST)
ಹರಳೆ ಹಣ್ಣನ್ನು ತಲೆ ಹಚ್ಚುವುದರಿಂದ ದೇಹ ತಂಪಾಗುವುದು ಮತ್ತು ಕೂದಲು ಚೆನ್ನಾಗಿ ಬೆಳೆಯುತ್ತವೆ.
ಬೇವಿನ ಎಣ್ಣೆಯನ್ನು ನೀರಿನಲ್ಲಿ ಸೇರಿಸಿ ಸ್ನಾಮ ಮಾಡುವುದರಿಂದ ಚರ್ಮದ ಮೇಲಿನ ಕಲೆಗಳು ಮಾಯವಾಗುತ್ತವೆ.
 
ಜೇನು ತುಪ್ಪವನ್ನು ಗಾಯವಾದ ಕಲೆಗಳ ಮೇಲೆ ಹಚ್ಚುತ್ತಿದ್ದರೆ ಕಲೆಗಳು ನಿವಾರಣೆಯಾಗುತ್ತವೆ.
ಹಿಂಗನ್ನು ನೀರಿನಲ್ಲಿ ತೇದು ಮೊಡವೆಗಳಿಗೆ ಹಚ್ಚಿದರೆ ಮೊಡವೆಗಳು ಮಾಯವಾಗುತ್ತವೆ.
 
ಮುಖವನ್ನು ಸ್ವಚ್ಚವಾಗಿ ತೊಳೆದು ಸೌತೇಕಾಯಿ ಬಿಲ್ಲೆಯಿಂದ ಮುಖದಾದ್ಯಂತ ನಯವಾಗಿ ಉಜ್ಜಿ. ಪ್ರತಿ ದಿನ ಈ ಉಪಚಾರ ಮಾಡುವುದರಿಂದ ಸುಡು ಬಿಸಿಲಿನ ಬೇಗೆಯಿಂದ ಮುಖ ಕಪ್ಪಾಗಿರುವುದು ಹೋಗುತ್ತದೆ.
 
ನೆಲ್ಲಿಕಾಯಿಯನ್ನು ಜಜ್ಜಿ ರಸ ತೆಗೆದು ಅದನ್ನು ದಿನಲೂ ಅಂಗಾಲು ಅಂಗೈಗಳಿಗೆ ಲೇಪಿಸಿದರೆ ಅಂಗಾಲು ಅಂಗೈ ಬೆವರುವುದು ನಿಲ್ಲುತ್ತದೆ.

ವೆಬ್ದುನಿಯಾವನ್ನು ಓದಿ