ಶೀತದ ನೆಗಡಿಗೆ

ಶುಕ್ರವಾರ, 21 ನವೆಂಬರ್ 2014 (14:19 IST)
ಕಾಳುಮೆಣಸಿನ ಚೂರ್ಣವನ್ನು ಜೇನುತುಪ್ಪದಲ್ಲಿ ಕಲಸಿ ಸೇವಿಸಿದರೆ ಶೀತದ ನೆಗಡಿ ನಿವಾರಣೆಯಾಗುವದು.
 
ಸ್ವಲ್ಪ ಉಪ್ಪು ಬೆರೆಸಿದ ನೀರಿಗೆ ನಿಂಬೆ ಹಣ್ಣಿನ ರಸವನ್ನು ಮಿಶ್ರ ಮಾಡಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ಅಜೀರ್ಣ ನಿವಾರಣೆಯಾಗುತ್ತದೆ.
 
ಜೀರಿಗೆ ಕಷಾಯಕ್ಕೆ ಹಾಲು ಜೇನುತುಪ್ಪಾ ಬೆರಸಿ ಗರ್ಭಧಾರಣೆಯ ಅವಧಿಯಲ್ಲಿ ಪ್ರತಿದಿನವೂ ಸೇವಿಸುತ್ತಾ ಬಂದರೆ ಎದೆಹಾಲು ಯಥೇಚ್ಛವಾಗಿರುವುದು.
 
ಒಂದು ಬಟ್ಟಲು ಜೀರಿಗೆ ಕಷಾಯಕ್ಕೆ ಒಂದು ಚಿಟಕಿ ಏಲಕ್ಕಿ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ಪಿತ್ತದೋಷಗಳು ನಿವಾರಣೆಯಾಗುತ್ತವೆ.
 
ಬಿಸಿ ಹಾಲಿಗೆ ಕಾಳು ಮೆಣಸಿನ ಪುಡಿ ಮತ್ತು ಕಲ್ಲು ಸಕ್ಕರೆ ಸೇರಿಸಿ ಕುಡಿಯುವುದರಿಂದ ನೆಗಡಿ ಕಡಿಮೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ