ಪುರುಷರ ಸೌಂದರ್ಯ ಹಾಳಾಗಲು ಏನು ಕಾರಣ ಗೊತ್ತಾ…?

ಸೋಮವಾರ, 22 ಜನವರಿ 2018 (07:22 IST)
ಬೆಂಗಳೂರು : ಮುಖದ ಹಾಗು ದೇಹದ ಚರ್ಮ ಸುಂದರವಾಗಿದ್ದರೆ ಪುರುಷರು ಅಂದವಾಗಿ ಕಾಣಿಸುತ್ತಾರೆ. ಆದರೆ ಅದೇ ಮುಖದ ಚರ್ಮ ಹಾಳಾದರೆ ಮುಖದ ಸೌಂದರ್ಯ ಕೂಡ ಹಾಳಾಗುತ್ತದೆ. ಈ ಚರ್ಮ ಹಾಳಾಗಲು ಹಲವು ಕಾರಣಗಳಿವೆ.


ಪುರುಷರು ಮುಖಕ್ಕೆ ಸೋಪು ಬಳಸುವುದರಿಂದ ಮುಖದ ಮಾಯಿಶ್ಚರೈಸರ್ ಹಾಳಾಗುತ್ತದೆ. ಯಾಕೆಂದರೆ ಸೋಪು ತುಂಬಾ ಹಾರ್ಡ್ ಇರುವುದರಿಂದ ಅದು ತ್ವಚೆಯನ್ನು ಡ್ರೈ ಮಾಡುತ್ತದೆ. ಆದ್ದರಿಂದ ಸೋಪ್ ಬದಲು ಫೇಸ್ ವಾಶ್ ಬಳಸಿ. ಧೂಮಪಾನ ಮಾಡುವುದರಿಂದ ಆರೋಗ್ಯದ ಮೇಲೆ ಮಾತ್ರವಲ್ಲ ಚರ್ಮದ ಮೇಲೂ ಪರಿಣಾಮ ಬೀರುತ್ತದೆ. ಮೂಖ ಬೇಗನೆ ಸುಕ್ಕುಗಟ್ಟುತ್ತದೆ. ನಿದ್ರಿಸುವ ಭಂಗಿ ಕೂಡ ನಿಮ್ಮ ಮೇಲೆ ಎಫೆಕ್ಟ್ ಆಗುತ್ತದೆ. ಅಂಗಾತ ಮಲಗಿದರೆ ಮುಖದ ಮೇಲೆ ಅಧಿಕ ಒತ್ತಡ ಬೀಳುವುದರಿಂದ ಮುಖದ ಮೇಲೆ ನೆರಿಗೆ ಉಂಟಾಗುತ್ತದೆ. ಮೊಬೈಲ್ ಅನ್ನು ಹೆಚ್ಚು ಬಳಸುವುದರಿಂದ ಅದರಲ್ಲಿ ಅಡಗಿರುವ ಕೊಳೆ ಧೂಳು ಕೂಡ ತಿಳಿದು ತಿಳಿಯದೆಯೋ ನಮ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ತಲೆಯನ್ನು ಯಾವಾಗಲೂ ಸ್ವಚ್ಚವಾಗಿಟ್ಟುಕೊಳ್ಳಬೇಕು. ಏಕೆಂದರೆ ತಲೆಯಲ್ಲಿ ಹೊಟ್ಟುಗಳಾದರೆ ಅದು ಮುಖದ ಮೇಲೆ ಬಿದ್ದರೆ ಗುಳ್ಳೆಗಳಾಗಿ ಮುಖ ಹಾಳಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ