ಹೊಳೆಯುವ ಚರ್ಮ ನಿಮ್ಮದಾಗಬೇಕೇ ?

ಬುಧವಾರ, 17 ನವೆಂಬರ್ 2021 (15:38 IST)
ಉತ್ತಮ ಮತ್ತು ಆರೋಗ್ಯಕರ ಚರ್ಮವು ಒಂದು ಆಶೀರ್ವಾದವಾಗಿದೆ ಆದರೆ ಹೊಳೆಯುವ ಚರ್ಮವನ್ನು ಪಡೆಯುವುದು ಅಷ್ಟು ಸುಲಭವಲ್ಲ.
ಅದನ್ನು ಪಡೆಯಲು ಸರಿಯಾಗಿ ತಿನ್ನುವುದು, ದಿನವಿಡೀ ಸಾಕಷ್ಟು ನೀರು ಕುಡಿಯುವುದು. ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುವುದು ಮಾತ್ರವಲ್ಲದೆ ಕಲೆಗಳು ಮತ್ತು ನಿಮ್ಮ ಚರ್ಮದ ಟೋನ್ ಅನ್ನು ಸಹ ತೆಗೆದುಹಾಕಲು ಸಹಾಯ ಮಾಡುತ್ತದೆ. ಆದರೆ ನೈಸರ್ಗಿಕವಾಗಿ ಹೊಳೆಯುವ ಚರ್ಮವನ್ನು ಪಡೆಯುವುದು ಹೇಗೆ? ನಿಮಿಷಗಳಲ್ಲಿ ಹೊಳೆಯುವ ಚರ್ಮಕ್ಕಾಗಿ ಕೆಲವು ಅತ್ಯುತ್ತಮ ಮನೆಮದ್ದುಗಳು ಇಲ್ಲಿದೆ.
 ನಿಂಬೆಹಣ್ಣು
ನಿಂಬೆಯು ಹೊಳಪುಯುಕ್ತ ಚರ್ಮಕ್ಕೆ ಉತ್ತಮ ಎಂದು ಹೇಳಲಾಗುತ್ತದೆ. ಇದು ಅದ್ಭುತ ಮನೆಮದ್ದು ಎಂದು ಹಲವು ಬಾರಿ ಸಾಬೀತಾಗಿದೆ. ಇದು ಸಿಟ್ರಿಕ್ ಆಮ್ಲ ಮತ್ತು ವಿಟಮಿನ್ ಸಿ ಯನ್ನು ಸಮೃದ್ಧವಾಗಿ ಹೊಂದಿದೆ.  ಇದು ಶಕ್ತಿಯುತವಾದ  ಆ್ಯಂಟಿ ಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಚರ್ಮವನ್ನು ತೇವಗೊಳಿಸುವ ಮೂಲಕ ಹಗುರವಾದ ಚರ್ಮದ ಬಣ್ಣವನ್ನು ಸಾಧಿಸಲು ಸಹಾಯ ಮಾಡುತ್ತದೆ.
ನಿಂಬೆಹಣ್ಣುಗಳು ನಮ್ಮ ದೇಹವನ್ನು ನಿರ್ವಿಷಗೊಳಿಸುತ್ತದೆ ಮತ್ತು ಸೋಂಕುಗಳು ಮತ್ತು ಮೊಡವೆಗಳನ್ನು ತಡೆಯುತ್ತದೆ. ಹಾಗಾಗಿ ನಿಯಮಿತವಾಗಿ ಚರ್ಮಕ್ಕೆ ನಿಂಬೆಹಣ್ಣನ್ನು ಬಳಸುವುದು ನಿಮ್ಮ ತ್ವಚೆ ಹೊಳೆಯುವಂತೆ ಮಾಡುತ್ತದೆ.
ಮೊಸರು
ಆವಕಾಡೊ ಅಥವಾ ಬೆಣ್ಣೆ ಹಣ್ಣು ಹಾಗೂ  ಮೊಸರು ಉತ್ತಮ ಸಂಯೋಜನೆಯಾಗಿದೆ ಎನ್ನಲಾಗುತ್ತದೆ. ಮೊದಲು ಬೆಣ್ಣೆ ಹಣ್ಣನ್ನು ಪೇಸ್ಟ್ ಮಾಡಿ. ಇದರಲ್ಲಿ ಎರಡು ಚಮಚ ಮೊಸರನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷಗಳ ನಂತರ ತಣ್ಣೀರಿನಿಂದ ಮುಖ ತೊಳೆದರೆ ಸಾಕು. ಇದರಿಂದ ನಿಮ್ಮ ತ್ವಚೆಯ ಹೊಳಪು ಹೆಚ್ಚಾಗುತ್ತದೆ.
ಚಿಯಾ ಬೀಜಗಳು
ಚಿಯಾ ಬೀಜಗಳು ಆರೋಗ್ಯಕ್ಕೆ ಎಷ್ಟು ಉಪಯುಕ್ತ ಎಂಬುದು ಎಲ್ಲರಿಗೂ ತಿಳಿದಿದೆ. ಹಾಗೆಯೇ ಇದು ನಿಮ್ಮ ಚರ್ಮದ ಆರೋಗ್ಯಕ್ಕೆ ಸಹ ಉತ್ತಮ ಎಂದು ಹೇಳಲಾಗುತ್ತದೆ. ಇದರಲ್ಲಿ ಒಮೆಗಾ 3 ಮತ್ತು ಒಮೆಗಾ 6 ಕೊಬ್ಬಿನ ಆಮ್ಲಗಳಲ್ಲಿ ಸಮೃದ್ಧವಾಗಿದೆ. ಇವೆರಡೂ ಒಟ್ಟಿಗೆ ಇರುವುದು ಬಹಳ ಅಪರೂಪ. ಇದು ಚರ್ಮವನ್ನು ತೇವಗೊಳಿಸುತ್ತದೆ. ಹಾಗಾಗಿ ನೀವು ಚಿಯಾ ಬೀಜಗಳನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಹಾಗೆಯೇ ನೀವು ಪ್ರತಿದಿನ ಚಿಯಾ ಬೀಜಗಳನ್ನು ಸೇವನೆ ಮಾಡುವುದು ಸಹ ಒಳ್ಳೆಯದು.
ಫೇಸ್ ಮಾಯಿಶ್ಚರೈಸರ್ ಮತ್ತು ಬೇಕಿಂಗ್ ಸೋಡಾ
2 ಟೇಬಲದದ ಸ್ಪೂನ್ ಫೇಶಿಯಲ್ ಮಾಯಿಶ್ಚರೈಸರ್ ಅನ್ನು ತೆಗೆದುಕೊಂಡು ಅದನ್ನು 1 ಚಮಚ ಅಡಿಗೆ ಸೋಡಾದೊಂದಿಗೆ ಚನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಹಚ್ಚಿ ಮತ್ತು ಮೃದುವಾದ ಮೇಕಪ್ ಸ್ಪಾಂಜ್ ತೆಗೆದುಕೊಂಡು ನಿಮ್ಮ ಮುಖಕ್ಕೆ ವೃತ್ತಾಕಾರದ ಚಲನೆಯಲ್ಲಿ ಸುಮಾರು 2 ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ