ಯಾವುದೇ ಖರ್ಚಿಲ್ಲದೇ ಮನೆಯಲ್ಲೇ ಸುಲಭವಾಗಿ ಕೂದಲಿಗೆ ಕಲರ್ ನೀಡಿ
ಶನಿವಾರ, 30 ಡಿಸೆಂಬರ್ 2017 (07:14 IST)
ಬೆಂಗಳೂರು: ಕೂದಲಿಗೆ ಕಲರ್ ಮಾಡಲು ಮಾರುಕಟ್ಟೆಯಲ್ಲಿ ಅನೇಕ ರೀತಿಯ ಬ್ಯೂಟಿ ಪ್ರೊಡಕ್ಟ್ ಗಳು ಸಿಗುತ್ತವೆ. ಆದರೆ ಅವುಗಳಿಂದ ಕೂದಲು ಹಾಳಾಗಿ ಉದುರಿಹೋಗುತ್ತದೆ. ಕೆಮಿಕಲ್ ಬ್ಯೂಟಿ ಪ್ರೊಡಕ್ಟ್ ಗಳನ್ನು ಉಪಯೋಗಿಸದೆ ಮನೆಯಲ್ಲೇ ಕೂದಲಿಗೆ ಕಲರ್ ಮಾಡಬಹುದು.
1 ಬಿಟ್ ರೋಟ್ ಹಾಗು 1 ಪ್ಯಾಕ್ ಹೆನ್ನಾವನ್ನು ತೆಗೆದುಕೊಳ್ಳಿ. ಬಿಟ್ ರೋಟ್ ಸಿಪ್ಪೆ ತೆಗೆದು ತುರಿದು ಒಂದು ಒಣಗಿದ ಹತ್ತಿಬಟ್ಟೆಗೆ ಹಾಕಿ ಅದರ ರಸ ತೆಗೆಯಿರಿ. ಆ ರಸಕ್ಕೆ ಸ್ವಲ್ಪ ಹೆನ್ನಾವನ್ನು ಮಿಕ್ಸ್ ಮಾಡಿ ನಂತರ ಅದನ್ನು 2 ಗಂಟೆಗಳ ಕಾಲ ಹಾಗೆ ಇಟ್ಟು ನಂತರ ಕೂದಲಿಗೆ ಹಚ್ಚಿ 2 ಗಂಟೆಗಳ ಕಾಲ ಒಣಗಲು ಬಿಡಿ. ನಂತರ ಅದನ್ನು ತೊಳೆಯಿರಿ. ಮೊದಲ ಬಾರಿ ವ್ಯತ್ಯಾಸ ಕಾಣಿಸುವುದಿಲ್ಲ ಮೂರು-ನಾಲ್ಕು ಬಾರಿ ಉಪಯೋಗಿಸಿದ ನಂತರ ವ್ಯತ್ಯಾಸ ಕಾಣಿಸುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ