ಮುಖವನ್ನು ಪ್ರತಿದಿನ ಕ್ಲೆನ್ಸಿಂಗ್, ಟೋನಿಂಗ್, ಮ್ಯಾಯಿಶ್ಚರೈಸಿಂಗ್ ಮಾಡಿಕೊಳ್ಳಿ ಇದರಿಂದ ನಿಮ್ಮ ಮುಖ ಹೊಸ ಲುಕ್ ನೊಂದಿಗೆ ನಳನಳಿಸುತ್ತದೆ.
ಇನ್ನು ಮೇಕಪ್ ಮಾಡಿಕೊಳ್ಳುವಾಗ ನಿಮ್ಮ ಮುಖಕ್ಕೆ ಸರಿಹೊಂದುವ ಫೌಂಡೇಶನ್ ಆರಿಸಿಕೊಳ್ಳಿ.ಹಾಗೇ ಕಣ್ಣಿಗೆ ಕಾಜಲ್ ಹಾಕುವದನ್ನು ಮರೆಯದಿರಿ. ಇನ್ನು ತುಟಿ ಗುಲಾಬಿ ಹಾಗೂ ಕೆಂಪು ಬಣ್ಣದ ಗ್ಲಾಸಿಯಾಗಿರುವ ಲಿಪ್ ಸ್ಟಿಕ್ ಹಚ್ಚಿಕೊಳ್ಳಿ. ಇದರಿಂದ ನೀವು ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಿರಿ.
ಇನ್ನು ನೀವು ಹನಿಮೂನ್ ಗೆ ಹೋಗುವಾಗ ಬೀಚ್ ಗೆ ಹೋಗುವ ಪ್ಲ್ಯಾನ್ ಇದ್ದರೆ ಅವಶ್ಯಕವಾಗಿ ಸನ್ ಸ್ಕ್ರೀನ್ ಹಚ್ಚಿಕೊಳ್ಳಿ. ಇದರಿಂದ ನಿಮ್ಮ ಚರ್ಮ ಟ್ಯಾನ್ ಆಗುವುದು ತಪ್ಪುತ್ತದೆ. ಹಾಗೇ ಸುತ್ತಾಟವೆಲ್ಲಾ ಮುಗಿದ ಮೇಲೆ ರಾತ್ರಿ ಮೇಕಪ್ ರಿಮೂವರ್ ನಿಂದ ಮೇಕಪ್ ತೆಗೆದು ಯಾವುದಾದರು ಒಳ್ಳೆಯ ನೈಟ್ ಕ್ರೀಂ ಹಚ್ಚಿಕೊಳ್ಳಿ. ಇದರಿಂದ ನಿಮ್ಮ ಮುಖ ಕಳೆಗುಂದುವುದು ತಪ್ಪುತ್ತದೆ.