ಬೆಂಗಳೂರು: ಕೆಲವೊಮ್ಮೆ ನಮ್ಮ ಚರ್ಮಕ್ಕೆ ಒಗ್ಗದ ಅಥವಾ ಅವಧಿ ಮೀರಿದ ಮೇಕಪ್ ಸಾಧನ ಬಳಸಿದಾಗ ಅಲರ್ಜಿ ಉಂಟಾಗಬಹುದು. ಹೀಗಾದಾಗ ಮಾಡಬಹುದಾದ ಮನೆ ಮದ್ದು ಇಲ್ಲಿದೆ.
ಕೆಲವರದ್ದು ಅಲರ್ಜಿ ಚರ್ಮವಾಗಿರುತ್ತದೆ. ಬೇಗನೇ ಅಲರ್ಜಿಯಾಗಿಬಿಡುತ್ತದೆ. ಕೆಲವರಿಗೆ ಕೆಲವೊಂದು ಮೇಕಪ್ ಸಾಧನಗಳು ಒಗ್ಗುವುದಿಲ್ಲ. ಹೀಗಾಗಿಯೇ ನಾವು ಚರ್ಮಕ್ಕೆ ಯಾವುದೇ ಪ್ರಯೋಗ ಮಾಡುವ ಮೊದಲು ತಜ್ಞರ ಸಲಹೆ ಪಡೆಯುವುದು ಉತ್ತಮ. ಒಂದು ವೇಳೆ ಇಷ್ಟಾಗಿಯೂ ಎಡವಟ್ಟಾದರೆ ಅದಕ್ಕೆ ಮನೆ ಮದ್ದುಗಳಿವೆ.
ಒಂದು ವೇಳೆ ಮೇಕಪ್ ಸಾಧನ ಬಳಸಿದ್ದರಿಂದ ಅಲರ್ಜಿ ತುರಿಕೆಯಾಗುತ್ತಿದ್ದರೆ ಬೇಕಿಂಗ್ ಸೋಡಾಗೆ ಸ್ವಲ್ಪ ನೀರು ಮಿಕ್ಸ್ ಮಾಡಿ ತುರಿಕೆಯಾಗುತ್ತಿರುವ ಭಾಗಕ್ಕೆ ಹಚ್ಚಬಹುದು. ಬೇಕಿಂಗ್ ಸೋಡಾ ದೇಹದಲ್ಲಿ ಪಿಎಚ್ ಲೆವೆಲ್ ನಿಯಂತ್ರಣದಲ್ಲಿರಿಸುವ ಶಕ್ತಿ ಹೊಂದಿದೆ.
ಒಂದು ವೇಳೆ ತಕ್ಷಣಕ್ಕೆ ಬೇಕಿಂಗ್ ಸೋಡಾ ಸಿಗದೇ ಇದ್ದಲ್ಲಿ ಜೇನು ತುಪ್ಪವನ್ನು ಬಳಸಿ ತುರಿಕೆಯಾಗುತ್ತಿರುವ ಅಥವಾ ಅಲರ್ಜಿಯಾದ ಜಾಗಕ್ಕೆ ಹಚ್ಚಿಕೊಳ್ಳಿ. ಅದೂ ಸಿಗದೇ ಹೋದಲ್ಲಿ ಮನೆಯಲ್ಲಿ ಅಡುಗೆಗೆ ಬಳಸುವ ಕೊಬ್ಬರಿ ಎಣ್ಣೆಯನ್ನು ಆ ಭಾಗಕ್ಕೆ ಹಚ್ಚಿಕೊಳ್ಳಬಹುದು.