ಬೆಂಗಳೂರು : ಮೆಹೆಂದಿ ಕೈಗಳ ಅಂದವನ್ನು ಹೆಚ್ಚಿಸುತ್ತದೆ. ಆದರೆ ಕೆಲವರಿಗೆ ಮೆಹೆಂದಿ ಹಚ್ಚಿಕೊಂಡು ಒಂದೆರಡು ದಿನಗಳಾಗುತ್ತಿದ್ದಂತೆ ಅದನ್ನು ತೆಗೆದು ಬಿಡಬೇಕು ಎನಿಸುತ್ತದೆ. ಅದನ್ನು ನೈಸರ್ಗಿಕವಾಗಿ ಅಳಿಸುವ ವಿಧಾನ ಇಲ್ಲಿದೆ.
*ಲಿಂಬು ಹುಳಿಯಿಂದ ಕೈಗೆ ಹಾಕಿಕೊಂಡ ಮೆಹೆಂದಿಯನ್ನು ಅಳಿಸಬಹುದಾಗಿದೆ. ಇದರಲ್ಲಿ ಬ್ಲೀಚಿಂಗ್ ಗುಣಗಳಿದ್ದುದರಿಂದ ಗಾಢವಾಗಿರುವ ಬಣ್ಣವನ್ನು ತಿಳಿಗೊಳಿಸಲು ಸಹಕಾರಿಯಾಗುತ್ತದೆ. ಒಂದು ಬಕೆಟ್’ನಲ್ಲಿ ಸ್ವಲ್ಪ ಬೆಚ್ಚಗಿರುವ ನೀರಿಗೆ ಲಿಂಬೆ ಹುಳಿ ಸ್ವಲ್ಪ ಹಾಕಿ ಇದರಲ್ಲಿ ಕೈ ಉಜ್ಜಬೇಕು. ದಿನಕ್ಕೆ ಎರಡು ಬಾರಿ ಮಾಡಿದಲ್ಲಿ ಉತ್ತಮ ರಿಸಲ್ಟ್ ಸಿಗುತ್ತದೆ.
*ಟೂತ್’ಪೇಸ್ಟ್ ಕೂಡ ಮೆಹೆಂದಿ ಬಣ್ಣ ತೆಗೆಯಲು ಸಹಕರಿಸುತ್ತದೆ. ಮೆಹೆಂದಿ ಮೇಲೆ ಪೇಸ್ಟ್ ಹಚ್ಚಿ ಅದು ಒಣಗುವವರೆಗೂ ಬಿಡಿ. ಅದು ಒಣಗಿದ ನಂತರ ಉಜ್ಜಿ ತೆಗೆಯಿರಿ.
*ಲಿಂಬೆ ಹುಳಿ ಹಾಗೂ ಬೇಕಿಂಗ್ ಸೋಡಾ ಮಿಕ್ಸ್ ಮಾಡಿ ಮೆಹೆಂದಿ ಮೇಲೆ ಹಚ್ಚಿ. ಐದು ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ