ಉಗುರುಗಳು ಚೆನ್ನಾಗಿ, ವೇಗವಾಗಿ ಬೆಳೆಯಲು ಇಲ್ಲಿದೆ ನೋಡಿ ಸುಲಭ ಉಪಾಯ
ಬುಧವಾರ, 17 ಜನವರಿ 2018 (06:55 IST)
ಬೆಂಗಳೂರು : ಕೈಕಾಲುಗಳ ಅಂದವನ್ನು ಹೆಚ್ಚಿಸುವುದರಲ್ಲಿ ಉಗುರುಗಳು ಪಾತ್ರವೂ ಮುಖ್ಯವಾಗಿರುತ್ತದೆ.. ಅದು ಸರಿಯಾಗಿ ಬೆಳೆಯದಿದ್ದರೆ ಕೈಕಾಲುಗಳು ಚೆನ್ನಾಗಿ ಕಾಣಿಸುವುದಿಲ್ಲ. ಉಗುರುಗಳನ್ನು ಶೇಪ್ ಮಾಡಿ ನೈಲ್ ಪಾಲಿಶ್ ಗಳನ್ನು ಹಾಕಿದರೆ ಕೈಕಾಲುಗಳ ಅಂದ ಇನ್ನಷ್ಟು ಹೆಚ್ಚಾಗುತ್ತದೆ. ಕೆಲವರಿಗೆ ಉಗುರುಗಳು ಸರಿಯಾಗಿ ಬೆಳೆಯುದಿಲ್ಲ. ಹಾಗೆ ಕೆಟ್ಟುಹೋಗಿರುತ್ತದೆ. ಅಂತವರಿಗೆ ಉಗುರುಗಳು ಚೆನ್ನಾಗಿ ವೇಗವಾಗಿ ಬೆಳೆಯಲು ಒಂದು ನೈಸರ್ಗಿಕವಾದ ವಿಧಾನವಿದೆ.
ಒಂದು ಚಿಕ್ಕ ಗ್ಲಾಸ್ ನಲ್ಲಿ ಬೆಳ್ಳುಳ್ಳಿಯ ರಸವನ್ನು ¼ ಚಮಚ , 2 ವಿಟಮಿನ್ ಇ ಮಾತ್ರೆಗಳಲ್ಲಿರುವ ಆಯಿಲ್ ನ್ನು ಹಾಕಿ ನಂತರ ಅದಕ್ಕೆ 1 ಚಮಚ ಆಲೋವೆರಾ ಜೆಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಆಮೇಲೆ ಅದಕ್ಕೆ ¼ ಚಮಚ ವ್ಯಾಸಲಿನ್ , ಸ್ವಲ್ಪ ಆಲೀವ್ ಆಯಿಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಈ ಮಿಶ್ರಣವನ್ನು ಒಂದು ಬಾಟಲಿಯಲ್ಲಿ ಹಾಕಿಡಿ. ಕಾಟನ್ ಬಡ್ಸ್ ಗಳನ್ನು ಆ ಮಿಶ್ರಣಕ್ಕೆ ಅದ್ದಿ ಉಗುರುಗಳ ಮೇಲೆ 5 ನಿಮಿಷ ಮಸಾಜ್ ಮಾಡಿ. ಇದನ್ನು ಮಲಗುವ ಮೊದಲು ಮಸಾಜ್ ಮಾಡಿ ರಾತ್ರಿಯಿಡಿ ಹಾಗೆ ಬಿಡಿ. ಹೀಗೆ ಮಾಡುವುದರಿಂದ ಉಗುರುಗಳು ಚೆನ್ನಾಗಿ ಬೆಳೆಯುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ