ತುಟಿಗೆ ಪದೇ ಪದೇ ಲಿಪ್ ಬಾಮ್ ಹಚ್ಚಿಕೊಳ್ಳುತ್ತಿದ್ದರೆ ಏನೆಲ್ಲಾ ಅಪಾಯವಾಗುತ್ತೆ ಗೊತ್ತಾ...?

ಭಾನುವಾರ, 11 ಫೆಬ್ರವರಿ 2018 (07:13 IST)
ಬೆಂಗಳೂರು : ನಯವಾದ ಹಾಗೂ ಮೃದುವಾದ ತುಟಿಗಳನ್ನು ಪಡೆಯಲು ಬಹುತೇಕ ಮಹಿಳೆಯರು ಲಿಪ್ ಬಾಮ್ ಹಚ್ಚಿಕೊಳ್ತಾರೆ. ಆದರೆ ತುಟಿಯ ಸೌಂದರ್ಯ ಹೆಚ್ಚಿಸಿಕೊಳ್ಳಲು ಹಚ್ಚಿಕೊಳ್ಳುವ ಲಿಪ್ ಬಾಮ್ ತುಟಿಗೆ ಲಾಭ ನೀಡುವ ಬದಲು ಸಾಕಷ್ಟು ನಷ್ಟವುಂಟು ಮಾಡುತ್ತದೆ.


ಪದೇ ಪದೇ ಲಿಪ್ ಬಾಮ್ ಹಚ್ಚಿಕೊಳ್ಳುವುದರಿಂದ ತುಟಿ ಮತ್ತಷ್ಟು ಹಾಳಾಗುತ್ತದೆ. ಲಿಪ್ ಬಾಮ್ ಗೆ ಹಾಕುವ ರಾಸಾಯನಿಕ, ತುಟಿಗಳ ಸೌಂದರ್ಯವನ್ನು ಹದಗೆಡಿಸುತ್ತದೆ. ಲಿಪ್ ಬಾಮ್ ನಲ್ಲಿ ಮೆಂತಾಲ್ ಅಂಶ ಜಾಸ್ತಿಯಿದ್ದಲ್ಲಿ ಅದು ತುಟಿಗೆ ಮತ್ತಷ್ಟು ಅಪಾಯಕಾರಿ.


ಪದೇ ಪದೇ ಲಿಪ್ ಬಾಮ್ ಬಳಸುವವರ ತುಟಿ ಮತ್ತಷ್ಟು ಬಿರುಕು ಬಿಡುತ್ತದೆ. ಲಿಪ್ ಬಾಮ್ ತುಟಿಗಳ ಅಲರ್ಜಿಗೆ ಕಾರಣವಾಗುತ್ತದೆ. ಪರಿಮಳಕ್ಕಾಗಿ ಲಿಪ್ ಬಾಮ್ ಗೆ ಬಳಸುವ ಕೆಮಿಕಲ್ ಅಲರ್ಜಿ ಸಮಸ್ಯೆಯನ್ನುಂಟು ಮಾಡುತ್ತದೆ. ಇದ್ರ ಬದಲು ಮನೆ ಮದ್ದು ಬಳಸಿ ಹೊಳಪಿನ ಹಾಗೂ ಮೃದುವಾದ ತುಟಿ ಪಡೆಯುವುದು ಒಳ್ಳೆಯದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ