ಮುಲ್ತಾನಿ ಮಿಟ್ಟಿ ಇದ್ರೆ ಸಾಕು ತ್ವಚೆಯ ಸಮಸ್ಯೆ ಮಾಯವಾಗುತ್ತೆ!

ಶುಕ್ರವಾರ, 22 ಅಕ್ಟೋಬರ್ 2021 (20:38 IST)
ಮುಲ್ತಾನಿ ಮಿಟ್ಟಿಯನ್ನು ಭಾರತದಲ್ಲಿ ಹಲವಾರು ಕಾಲದಿಂದಲೂ ಚರ್ಮದ ಸಮಸ್ಯೆಗಳಿಂದ ಪರಿಹಾರ ಪಡೆಯಲು ಮತ್ತು ಕಾಂತಿಯುತ, ಕಲೆರಹಿತ ತ್ವಚೆಯನ್ನು ಪಡೆಯಲು ಬಳಸಲಾಗುತ್ತದೆ. ಇದು ತಲೆಮಾರುಗಳಿಂದ ಹಸ್ತಾಂತರಿಸಲ್ಪಟ್ಟ ಹಳೆಯ ಔಷಧೀಯ ಮಾರ್ಗಗಳಲ್ಲಿ ಒಂದಾಗಿದೆ.

ಮುಲ್ತಾನಿ ಮಿಟ್ಟಿ ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸಲು ಉತ್ತಮವಾದ ಏಜೆಂಟ್ ಎನ್ನಲಾಗುತ್ತದೆ. ಅದು ಎಣ್ಣೆ, ಕೊಳಕು, ಬೆವರು ಮತ್ತು ಕಲ್ಮಶಗಳನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳುತ್ತದೆ, ಚರ್ಮವನ್ನು ಸ್ವಚ್ಛವಾಗಿ ಮತ್ತು ಮೃದುವಾಗಿರಿಸುತ್ತದೆ.
ಅಲ್ಲದೇ,ಚರ್ಮದ ಟೋನ್ ಅನ್ನು ಸಮಗೊಳಿಸುತ್ತದೆ ಮತ್ತು ಮೈಬಣ್ಣವನ್ನು ಹೆಚ್ಚು ಮಾಡುತ್ತದೆ. ಟ್ಯಾನಿಂಗ್ ಮತ್ತು ಪಿಗ್ಮೆಂಟೇಶನ್ ವಿರುದ್ಧ ಹೋರಾಡಲು ಸಹಕಾರಿ. ಬಿಸಿಲು, ಚರ್ಮದ ದದ್ದುಗಳು ಮತ್ತು ಸೋಂಕುಗಳ ಚಿಕಿತ್ಸೆಯಲ್ಲಿ ಇದು ಪರಿಣಾಮಕಾರಿ ಎನ್ನಲಾಗುತ್ತದೆ.
ಇದು ರಕ್ತ ಪರಿಚಲನೆಯನ್ನು ಸುಗಮಗೊಳಿಸುತ್ತದೆ, ಕಾಂತಿಯುತ, ಹೊಳೆಯುವ ಚರ್ಮಕ್ಕೆ ಕಾರಣವಾಗುತ್ತದೆ. ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್, ಕಲೆಗಳು, ಮೊಡವೆ ಕಲೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ.
ಮುಲ್ತಾನಿ ಮಿಟ್ಟಿಯನ್ನು ಹೇಗೆ ಬಳಸುವುದು

ಎಣ್ಣೆಯುಕ್ತ ಚರ್ಮಕ್ಕೆ
ದೆಹಲಿ ಮೂಲದ ಚರ್ಮದ ಆರೈಕೆ ತಜ್ಞರಾದ ಡಾ.ದೀಪಾಲಿ ಭಾರದ್ವಾಜ್ ಎಣ್ಣೆಯುಕ್ತ ಚರ್ಮಕ್ಕಾಗಿ ಮುಲ್ತಾನಿ ಮಿಟ್ಟಿ ಪ್ಯಾಕ್ ಅನ್ನು ಬಳಕೆ ಮಾಡಲು ಸಲಹೆ ನೀಡುತ್ತಾರೆ. ಸಮಾನ ಪ್ರಮಾಣದಲ್ಲಿ ಕಿತ್ತಳೆ ಸಿಪ್ಪೆ ಪುಡಿ ಮತ್ತು ಮುಲ್ತಾನಿ ಮಿಟ್ಟಿ ಮಿಶ್ರಣ ಮಾಡಿ, ಎರಡನ್ನೂ ರೋಸ್ ವಾಟರ್  ಹಾಕಿ ಮಿಶ್ರಣ ಮಾಡಿ. ಅದನ್ನು ನಿಮ್ಮ ಮುಖಕ್ಕೆ ಹಚ್ಚಿ ನಂತರ ಒಣಗಲು ಬಿಟ್ಟು, ಅದನ್ನು ತೊಳೆಯಿರಿ.
ಡಾರ್ಕ್ ಸರ್ಕಲ್ಸ್

ಸೌಂದರ್ಯ ತಜ್ಞೆ ಸುಪರ್ಣಾ ತ್ರಿಖಾ ಕಪ್ಪು ವರ್ತುಲಗಳ ಚಿಕಿತ್ಸೆಯಲ್ಲಿ ಮುಲ್ತಾನಿ ಮಿಟ್ಟಿ ಹೆಚ್ಚು ಪರಿಣಾಮಕಾರಿ ಎಂದು ಹೇಳುತ್ತಾರೆ.ಡಾರ್ಕ್ ಸರ್ಕಲ್ಸ್ ಹೋಗಲಾಡಿಸಲು, ಕೇವಲ ಅರ್ಧ ಆಲೂಗಡ್ಡೆಯನ್ನು ತೆಗೆದುಕೊಂಡು ಅದನ್ನು ತುರಿ ಮಾಡಿ. ನಿಂಬೆ ರಸ, ಒಂದು ಟೀಚಮಚ ತಾಜಾ ಕೆನೆ ಮತ್ತು ಮುಲ್ತಾನಿ ಮಿಟ್ಟಿ ಜೊತೆ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಕಣ್ಣುಗಳಿಗೆ ಹಚ್ಚಿ. ಮತ್ತು ಇಪ್ಪತ್ತು ನಿಮಿಷಗಳ ಕಾಲ ಬಿಡಿ. ನಂತರ ತೊಳೆಯಿರಿ.
ಸ್ಕ್ರಬ್ ಮತ್ತು ಎಕ್ಸ್ಫೋಲಿಯೇಟ್

ನಿಮ್ಮ ಚರ್ಮವನ್ನು ಎಕ್ಸ್ಫೋಲಿಯೇಟ್ ಮಾಡಲು ಬಯಸಿದರೆ, ಕಿತ್ತಳೆ ಸಿಪ್ಪೆ, ಶ್ರೀಗಂಧದ ಪುಡಿ ಮತ್ತು ಮುಲ್ತಾನಿ ಮಿಟ್ಟಿಗಳನ್ನು ಮಿಶ್ರಣ ಮಾಡಿ ಬಳಕೆ ಮಾಡುವುದು ಉತ್ತಮ. ಅಲ್ಲದೇ ನೀವು ಈ ಪೇಸ್ಟ್ ಗೆ ಕಡ್ಲೇ  ಹಿಟ್ಟು ಮತ್ತು ತುಳಸಿಯನ್ನು ಕೂಡ ಸೇರಿಸಬಹುದು ಮತ್ತು ಅದನ್ನು ನಿಮ್ಮ ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ.
ಕೂದಲಿಗೆ ಮುಲ್ತಾನಿ ಮಿಟ್ಟಿ ಬಳಕೆ ಮಾಡಬಹುದು
ನೀವು ಮುಲ್ತಾನಿ ಮಿಟ್ಟಿಯನ್ನು ನಿಮ್ಮ ಕೂದಲಿಗೆ  ಸಹ ಬಳಕೆ ಮಾಡಬಹುದು. ಇದು ನಿಮ್ಮ ಕೂದಲು ಹೊಳೆಯುವಂತೆ ಮಾಡುತ್ತದೆ.ಮೂರು ಚಮಚ ಮುಲ್ತಾನಿ ಮಿಟ್ಟಿಯನ್ನು ತೆಗೆದುಕೊಂಡು ಅದನ್ನು ಮೊಟ್ಟೆಯೊಂದಿಗೆ ಮಿಶ್ರಣ ಮಾಡಿ. ಇದಕ್ಕೆ ನೆಲ್ಲಿಕಾಯಿ  ರಸ, ನಿಂಬೆ ರಸ ಮತ್ತು ಒಂದು ಚಮಚ ಬಿಯರ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ನಿಮ್ಮ ಕೂದಲಿಗೆ ಹಚ್ಚಿ, ಸುಮಾರು 20 ನಿಮಿಷ ಬಿಟ್ಟು ತಲೆ ಸ್ನಾನ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ