ಚರ್ಮದ ಆರೋಗ್ಯ ಕಾಪಾಡಲು ಬಾದಾಮಿ ಮತ್ತು ಮುಲ್ತಾನಿ ಮಿಟ್ಟಿ ಸ್ಕ್ರಬ್ ಬಳಸಿ

ಗುರುವಾರ, 29 ಏಪ್ರಿಲ್ 2021 (09:39 IST)
ಬೆಂಗಳೂರು : ಮುಖದಲ್ಲಿರುವ ಸತ್ತ ಚರ್ಮವನ್ನು ತೆಗೆದುಹಾಕಲು ಸ್ಕ್ರಬ್ ಬಳಸುತ್ತಾರೆ. ಇದು ಮುಖದ ಹೊಳಪನ್ನು ಹೆಚ್ಚಿಸುತ್ತದೆ.  ಹಾಗಾಗಿ ಚರ್ಮದ ಆರೋಗ್ಯವನ್ನು ಕಾಪಾಡಲು  ಬಾದಾಮಿ ಮತ್ತು ಮುಲ್ತಾನಿ ಮಿಟ್ಟಿಯಿಂದ ಸ್ಕ್ರಬ್ ತಯಾರಿಸಿ ಬಳಸಿ.

ಬಾದಾಮಿ  ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ. ಇದು ಚರ್ಮದಲ್ಲಿರುವ ತೇವಾಂಶವನ್ನು ಉಳಿಸಿಕೊಳ‍್ಳುತ್ತದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗಳು ಫ್ರೀ ರಾಡಿಕಲ್ಸ್ ಗಳಿಂದ ಕಾಪಾಡುತ್ತದೆ. ಹಾಗೇ ಮುಲ್ತಾನಿ ಮಿಟ್ಟಿ ನಿಮ್ಮ ಚರ್ಮದ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ಇದು ಮೇದೋಗ್ರಂಥಿಗಳ ಸ್ರಾವವನ್ನು ತೆಗೆದುಹಾಕುತ್ತದೆ.

ಹಾಗಾಗಿ 6 ಬಾದಾಮಿಯನ್ನು ಪುಡಿ ಮಾಡಿ ಅದಕ್ಕೆ 1 ಚಮಚ ಮುಲ್ತಾನಿ ಮಿಟ್ಟಿ, 1 ಚಮಚ ರೋಸ್ ವಾಟರ್ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ. ಬಳಿಕ 5 ನಿಮಿಷಗಳ ಕಾಲ ಸ್ಟೀಮ್ ತೆಗೆದುಕೊಂಡು ಮುಖದ ಮೇಲೆ ಹಚ್ಚಿ ಮಸಾಜ್ ಮಾಡಿ ಒಣಗಿದ ಬಳಿಕ ವಾಶ್ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ