ಕಣ್ಣಿನ ಊತಕ್ಕೆ ಸುಲಭ ಪರಿಹಾರ ಇಲ್ಲಿದೆ

ಮಂಗಳವಾರ, 13 ಫೆಬ್ರವರಿ 2018 (06:22 IST)
ಬೆಂಗಳೂರು : ಕೆಲವೊಮ್ಮೆ ಕಣ್ಣಿನಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಇದ್ರಿಂದಾಗಿ ಮನೆಯಿಂದ ಹೊರ ಹೋಗುವುದೂ ಕಷ್ಟವಾಗುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ. ಸುಸ್ತು, ಬಹಳ ಹೊತ್ತು ಕಂಪ್ಯೂಟರ್ ಅಥವಾ ಟಿವಿ, ಮೊಬೈಲ್ ನೋಡುತ್ತಿದ್ದರೆ, ಅನಿದ್ರೆ ಇವೆಲ್ಲವೂ ಕಾರಣವಾಗುತ್ತದೆ. ನಿಮಗೂ ಆಗಾಗ ಕಣ್ಣಿನ ಊತ ಕಾಡುತ್ತಿದ್ದರೆ ಈ ಮನೆ ಮದ್ದನ್ನು ಬಳಸಿ ಸುಲಭವಾಗಿ ಕಣ್ಣಿನ ಊತಕ್ಕೆ ಪರಿಹಾರ ಕಂಡುಕೊಳ್ಳಬಹುದು.


* ಸೌತೆಕಾಯಿ ಕೇವಲ ಕಣ್ಣಿನ ಊತವನ್ನು ಮಾತ್ರ ಕಡಿಮೆ ಮಾಡುವುದಿಲ್ಲ. ಜೊತೆಗೆ ಕಣ್ಣು ಹೊಳಪು ಪಡೆಯುತ್ತದೆ. ಕಣ್ಣುಗಳು ಫ್ರೆಶ್ ಆಗುತ್ವೆ. ಸೌತೆಕಾಯಿಯನ್ನು ಕತ್ತರಿಸಿ 8-10 ನಿಮಿಷಗಳ ಕಾಲ ಕಣ್ಣಿನ ಮೇಲಿಟ್ಟುಕೊಳ್ಳಿ. ಇದ್ರಿಂದ ಊತ ಕಡಿಮೆಯಾಗುತ್ತದೆ.
* ಆಲೂಗಡ್ಡೆಯನ್ನು ಮಿಕ್ಸಿ ಮಾಡಿ ರಸ ತೆಗೆದುಕೊಳ್ಳಿ. ನಂತ್ರ ಅದಕ್ಕೆ ಎಣ್ಣೆ ಬೆರೆಸಿ ಕಣ್ಣಿನ ಸುತ್ತ ಹಚ್ಚಿಕೊಳ್ಳಿ.
* ನೀರು ಎಲ್ಲ ರೋಗಕ್ಕೂ ಮದ್ದು. ಪ್ರತಿದಿನ 8-10 ಗ್ಲಾಸ್ ನೀರು ಕುಡಿಯಿರಿ. ಇದ್ರಿಂದ ಕಣ್ಣಿನ ಊತ ಕಡಿಮೆಯಾಗುತ್ತದೆ. ಬೆಚ್ಚಗಿನ ನೀರು ಅಥವಾ ಹಾಲಿನಿಂದ ಕಣ್ಣನ್ನು ತೊಳೆದುಕೊಳ್ಳಿ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ