ಸುಂದರವಾದ ಚರ್ಮ ಪಡೆಯುವುದು ಎಲ್ಲರ ಕನಸು. ಕೆಲವು ನೈಸರ್ಗಿಕವಾದ ತೈಲದಿಂದ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು.
ನಮ್ಮ ಪೂರ್ವಿಕರು ಕೂಡ ಹಿಂದೆ ತಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳುವ ಸಲುವಾಗಿ ಸಾರಭೂತ ತೈಲಗಳನ್ನು ತಮ್ಮ ದೇಹಕ್ಕೆ ಹಾಗು ತ್ವಚೆಗೆ ಲೇಪಿಸಿಕೊಳ್ಳುತ್ತಿದ್ದರು. ಆಯುರ್ವೇದದಲ್ಲಿ ತೈಲಗಳಿಗೆ ತನ್ನದೇ ಆದ ಪ್ರಾಧ್ಯನ್ಯತೆ ಇರುವುದು ನಮಗೆಲ್ಲರಿಗೂ ತಿಳಿದೇ ಇದೆ.
ಮೊಡವೆಗಳಿಂದ ಹಿಡಿದು ಸುಕ್ಕುಗಟ್ಟಿದ ಚರ್ಮಕ್ಕೂ ಕೂಡ ಎಣ್ಣೆಗಳು ಹೆಚ್ಚು ಪ್ರಯೋಜನಕಾರಿಯಾಗಿ ಕೆಲಸ ಮಾಡುತ್ತದೆ. ಮುಖ್ಯವಾಗಿ ತೈಲಗಳು ಮಾಯಿಶ್ಚರೈಸರ್ ಆಗಿ ಕಾರ್ಯ ನಿರ್ವಹಿಸುತ್ತದೆ. ತೈಲದ ಉಪಯೋಗಗಳು ಹಲವಾರು ಆದರೆ ಉಪಯೋಗಿಸುವ ಮಾರ್ಗಗಳು ಕೂಡ ಸರಿಯಾಗಿರಬೇಕು ಅಲ್ಲವೇ? ಅರ್ಗಾನ್ಎಣ್ಣೆ
ಈ ಅರ್ಗಾನ್ ಎಣ್ಣೆಯು ವಿಟಮಿನ್ ಗಳಿಂದ ಸಮೃದ್ಧವಾಗಿದ್ದು, ಚರ್ಮದ ಪೋಷಣೆಗೆ ಹೆಚ್ಚು ಪರಿಣಾಮಕಾರಿಯಾಗಿದೆ. ಮುಖ್ಯವಾಗಿ ಈ ಅರ್ಗಾನ್ ಎಣ್ಣೆ ಶುಷ್ಕ ಅಥವಾ ಒಣ ತ್ವಚೆ ಹೊಂದಿರುವವರಿಗೆ ಸೂಕ್ತವಾದುದು. ಸುಕ್ಕುಗಳಿಂದ ಕೂಡಿರುವ ತ್ವಚೆಗೆ ಇದೊಂದು ಔಷಧವೇ ಸರಿ. ವಿಟಮಿನ್ ಇ ಮತ್ತು ಕೊಬ್ಬಿನಾಮ್ಲಗಳ ಸಂಯೋಜನೆಯು ಸುಲಭವಾಗಿ ಹೀರಲ್ಪಡುತ್ತದೆಯಲ್ಲದೇ, ಚರ್ಮವನ್ನು ನಯ ಹಾಗು ಮೃದುವಾಗಿಸುತ್ತದೆ. ಈ ಅರ್ಗಾನ್ ಎಣ್ಣೆಯ ಫಲಿತಾಂಶವು ತಕ್ಷಣವೇ ನೋಡಬಹುದು. ಸೀಡರ್ವುಡ್ತೈಲ
ನಿಮ್ಮ ತ್ವಚೆಯು ಮೊಡವೆಗಳಿಂದ ಕೂಡಿದ್ದರೆ, ಸೀಡರ್ ವುಡ್ ಎಣ್ಣೆ ಸೂಕ್ತವಾದುದು. ಏಕೆಂದರೆ ಮೊಡವೆಗಳ ತ್ವಚೆಯಿಂದಾಗಿ ಕೆಲವು ಕಲೆಗಳು ಹಾಗೆಯೇ ಉಳಿದು ಬಿಡುತ್ತದೆ. ಕೆಲವು ಮೊಂಡುತನದ ಕಲೆಗಳಿಗೆ ಈ ಎಣ್ಣೆ ಅತ್ಯುತ್ತಮವಾಗಿ ಪರಿಣಾಮಕಾರಿಯಾಗಿದೆ. ನೀವು ಮಾರುಕಟ್ಟೆಯಲ್ಲಿ ದೊರೆಯುವ ಹಲವಾರು ಉತ್ಪನ್ನಗಳಿಂದ ಬೇಸತ್ತಿದ್ದರೆ, ಒಮ್ಮೆ ಈ ಸೀಡರ್ ವುಡ್ ಎಣ್ಣೆಯನ್ನು ಉಪಯೋಗಿಸಿ.
ತ್ವಚೆಯ ಮೇಲೆ ಬೇಗ ಸುಕ್ಕುಗಳು ಉಂಟಾಗಿ, ಯುವ ವಯಸ್ಸಿನಲ್ಲಿಯೇ ವಯಸ್ಸಾದವರಂತೆ ಕಾಣುತ್ತಾರೆ. ಇದು ಮುಖ್ಯವಾಗಿ ಹೆಚ್ಚು ಮಾಲಿನ್ಯವಿರುವ ಪ್ರದೇಶಗಳಲ್ಲಿ ವಾಸಿಸುವವರಿಗೆ ಇಂತಹ ಚರ್ಮದ ತೊಂದರೆಗಳು ಕಂಡು ಬರುತ್ತದೆ. ಈ ವೆಟಿವರ್ ಎಣ್ಣೆಯು ಮೇಲಿನ ಎಲ್ಲಾ ಚರ್ಮದ ಸಮಸ್ಯೆಗಳನ್ನು ದೂರ ಮಾಡಿ, ಸುಂದರವಾದ ಚರ್ಮವನ್ನು ಪಡೆಯಲು ಸಹಾಯ ಮಾಡುತ್ತದೆ.
ಕೆಲವು ವೆಟಿವರ್ ತೈಲದ ಹನಿಗಳನ್ನು ತೆಂಗಿನ ಎಣ್ಣೆ ಅಥವಾ ಲ್ಯಾವೆಂಡರ್ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ನಿಮ್ಮ ತ್ವಚೆಯ ಮೇಲೆ ಲೇಪಿಸಿ. ೧೫ ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಹೀಗೆ ಮಾಡುವುದರಿಂದ ಚರ್ಮ ಮೇಲೆ ಉತ್ತಮ ಫಲಿತಾಂಶವನ್ನು ಕಾಣಬಹುದು. ಥೀವ್ಸ್ತೈಲ
ಥೀವ್ಸ್ ಎಣ್ಣೆಯು ಹಲವಾರು ಸಾರಭೂತ ತೈಲಗಳ ಪ್ರಬಲ ಮಿಶ್ರಣವಾಗಿದೆ. ಇದರಲ್ಲಿ ಲವಂಗ, ದಾಲ್ಚಿನ್ನಿ, ರೋಸ್ಮರಿ ಮತ್ತು ನಿಂಬೆಯ ಮಿಶ್ರಣವಿದೆ. ಮುಖ್ಯವಾಗಿ ಈ ಎಣ್ಣೆಯು ಚರ್ಮದ ಮೇಲೆ ವಾಸಿಸುವ ಹಾನಿಕಾರಕ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳಿಂದ ಪಾರು ಮಾಡಲು ಸಹಾಯ ಮಾಡುತ್ತದೆ. ಇದು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು, ಅನೇಕ ಚರ್ಮ ಸಮಸ್ಯೆಗಳಾದ ಗಾಯವನ್ನು ಗುಣಪಡಿಸುವಿಕೆ, ನೋವುಗಳಿಗೆ ಪರಿಹಾರವನ್ನು ಸೂಚಿಸುತ್ತದೆ. ಲ್ಯಾವೆಂಡರ್ತೈಲ
ಲ್ಯಾವೆಂಡರ್ ಸಾರಭೂತ ತೈಲವು ಅರೋಮಾಥೆರಪಿಯಲ್ಲಿ ಬಳಸುವ ಅತ್ಯಂತ ಜನಪ್ರಿಯವಾದ ತೈಲಗಳಲ್ಲಿ ಒಂದಾಗಿದೆ. ಈ ತೈಲವು ಶಿಲೀಂಧ್ರಗಳ ಸೋಂಕುಗಳ, ಅಲರ್ಜಿ, ಖಿನ್ನತೆ, ನಿದ್ರಾಹೀನತೆ, ಎಗ್ಜಿಮಾ, ವಾಕರಿಕೆ ಮತ್ತು ಮುಟ್ಟಿನ ಸೆಳೆತಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ನಂಬಲಾಗಿದೆ. ಇಷ್ಟೇ ಅಲ್ಲದೇ, ಚರ್ಮವನ್ನು ತುರಿಕೆಗಳಿಂದ ವಿಮುಕ್ತಿ ಹೊಂದಲು ಸಹಾಯ ಮಾಡುವುತ್ತದೆ. ಚರ್ಮಕ್ಕೆ ಕಾಂತಿಯನ್ನು ನೀಡಿ, ಸೂರ್ಯನ ತೀಕ್ಷ್ಣವಾದ ಕಿರಣಗಳಿಂದ ಹಾನಿಗೊಳಗಾದ ಚರ್ಮವನ್ನು ಕಾಪಾಡುತ್ತದೆ.