ಆರೋಗ್ಯಕರ ಜೀವನಕ್ಕೆ ಆಯುರ್ವೇದ ಕಷಾಯ!
ಶೀತಲಗಾಳಿ ಜೊತೆಗೆ ಮಳೆ ದಿನನಿತ್ಯ ಇರುವುದರಿಂದ ದೇಹದ ಆರೋಗ್ಯದಲ್ಲಿ ಬದಲಾವಣೆ ಕಂಡುಬರುವುದು ಸಾಮಾನ್ಯವಾಗಿದೆ.
ಹೀಗಾಗಿ ನಮ್ಮ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಲು ಮತ್ತು ಎದುರಾಗುವ ಸಣ್ಣಪುಟ್ಟ ಸೋಂಕುಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಆಯುರ್ವೇದ ಡಿಕಾಕ್ಷನ್?
•ವಿವಿಧ ಬಗೆಯ ದಿನ ಬಳಕೆಯ ಮಸಾಲೆ ಪದಾರ್ಥಗಳನ್ನು ಹಾಗೂ ಆಯುರ್ವೇದ ಪದಾರ್ಥಗಳನ್ನು ನೀರಿನಲ್ಲಿ ಸ್ವಲ್ಪ ಕಾಲ ಕುದಿಸಿ ಅದರಿಂದ ಬರುವ ಸಾರವನ್ನು ದಿನದಲ್ಲಿ ಹಲವು ಬಾರಿ ಸೇವನೆ ಮಾಡಿದರೆ ಚಳಿಗಾಲಕ್ಕೆ ಸಂಬಂಧ ಪಟ್ಟಂತೆ ಶೀತದ ಸಮಸ್ಯೆಗಳು ಹಾಗೂ ಇನ್ನಿತರ ಆರೋಗ್ಯ ತೊಂದರೆಗಳು ದೂರವಾಗುತ್ತವೆ.
•ಯಾವ ಬಗೆಯ ಆರೋಗ್ಯ ಸಮಸ್ಯೆಯಿಂದ ತೊಂದರೆಗೆ ಒಳಗಾಗಿದ್ದೇವೆ ಎನ್ನುವುದರ ಮೇಲೆ ನಾವು ಆಯ್ಕೆ ಮಾಡಿಕೊಳ್ಳುವ ಗಿಡಮೂಲಿಕೆಗಳು ನಿಂತಿರುತ್ತವೆ.
•ಆಯುರ್ವೇದ ತಜ್ಞರು ಹೇಳುವ ಹಾಗೆ ಒಣ ಶುಂಠಿ ಹಾಗೂ ಕಾಳು ಮೆಣಸು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ನೀಡಬಲ್ಲದು.
•ನೋಡಲು ಸ್ವಲ್ಪ ಗಾಢವಾದ ರುಚಿಯಿದ್ದರೂ ಕೂಡ, ಶುಂಠಿ ಹಾಗೂ ಕಾಳುಮೆಣಸು ವಾತ ಹಾಗೂ ಕಫ ಸಮಸ್ಯೆಗೆ ಉತ್ತಮ ರಾಮಬಾಣವಾಗಿ ಕೆಲಸ ಮಾಡುತ್ತವೆ.
•ದೇಹದ ಉಸಿರಾಟ ವ್ಯವಸ್ಥೆಯನ್ನು, ದೇಹದ ಜೀರ್ಣಶಕ್ತಿಯನ್ನು ಹೆಚ್ಚು ಮಾಡುವ ಜೊತೆಗೆ ಅಗತ್ಯವಾಗಿ ಬೇಕಾದ ಮಟ್ಟದಲ್ಲಿ ತಾಪಮಾನವನ್ನು ಕೂಡ ದೇಹದಲ್ಲಿ ನಿರ್ವಹಣೆ ಮಾಡುತ್ತವೆ.
ತಯಾರು ಮಾಡುವ ವಿಧಾನ
•ಮೊದಲು ಒಂದು ಲೋಟ ನೀರನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಅದಕ್ಕೆ ಒಣಶುಂಠಿ ಹಾಗೂ ಕಾಳುಮೆಣಸಿನ ಪುಡಿಯನ್ನು ಸೇರಿಸಿ ನೀರು ಅರ್ಧಕ್ಕೆ ಬರುವವರೆಗೆ ಚೆನ್ನಾಗಿ ಕುದಿಸಿ.
•ಆ ನಂತರ ಇದಕ್ಕೆ ಜೇನುತುಪ್ಪವನ್ನು ಹಾಕಿ ಮಿಶ್ರಣ ಮಾಡಿ
•ದಿನದಲ್ಲಿ 3 ರಿಂದ 4 ಬಾರಿ ಇದನ್ನು ಸೇವನೆ ಮಾಡುವುದರಿಂದ, ಕೆಮ್ಮು ಅಥವಾ ಕಫ ಜೊತೆಗೆ ಶೀತದ ಇನ್ನು ಕೆಲವು ರೋಗಲಕ್ಷಣಗಳು ದೂರವಾಗುತ್ತವೆ.
ರೋಗನಿರೋಧಕ ಶಕ್ತಿ
ಚಳಿಗಾಲ ಅಥವಾ ಮಳೆಗಾಲ ಬಂದರೆ ಸಾಧಾರಣವಾಗಿ ಬಹುತೇಕ ಜನರು ಹುಷಾರು ತಪ್ಪುತ್ತಾರೆ. ಹೀಗಾಗಿ ಈ ಸಂದರ್ಭದಲ್ಲಿ ವಿವಿಧ ಬಗೆಯ ಗಿಡಮೂಲಿಕೆಗಳನ್ನು ಮಿಶ್ರಣ ಮಾಡಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಬಹುದು. ಇದರಿಂದ ದೇಹದಲ್ಲಿ ವಿಷಕಾರಿ ಅಂಶಗಳ ಪ್ರಮಾಣ ಕೂಡ ದೂರವಾಗುತ್ತದೆ.
ಮಧುಮೇಹ
ಒಂದು ವೇಳೆ ನೀವು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರೆ, ನಿಮಗೆ ಮೆಂತ್ಯ ಹಾಗೂ ಹಳದಿ ಅಂದರೆ ಪ್ರತಿದಿನ ಅಡುಗೆಯಲ್ಲಿ ಬಳಕೆ ಮಾಡುವ ಅರಿಶಿನ ಪ್ರಯೋಗಿಕವಾಗಿ ರಾಮಬಾಣದಂತೆ ಕೆಲಸ ಮಾಡಿ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಗ್ಗಿಸಬಲ್ಲದು. ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವನೆ ಮಾಡುವುದರಿಂದ ಕ್ರಮೇಣವಾಗಿ ಪರಿಹಾರವನ್ನು ಕಾಣುತ್ತಾ ಹೋಗಬಹುದು.
ತಯಾರು ಮಾಡುವ ವಿಧಾನ
•ಮೊದಲು ಕುದಿಯುವ ನೀರಿಗೆ 1 ಟೀಚಮಚ ಓಂ ಕಾಳುಗಳನ್ನು ಮತ್ತು ಸೋಂಪು ಕಾಳು ಗಳನ್ನು ಹಾಕಿ ಮಿಶ್ರಣ ಮಾಡಿ
•ಈಗ ಇದನ್ನು ಒಲೆಯ ಮೇಲೆ ಚೆನ್ನಾಗಿ ಕುದಿಸಿ ಆನಂತರ ಆರಿಸಿ ರುಚಿಗೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ.
•ಊಟ ಆದ ನಂತರ ನಿಮ್ಮ ಜೀರ್ಣ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಲು ಅದನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.