ಮೊಡವೆಗಳಿಗೆ ರಾಮಬಾಣ ಈ ಫೇಸ್​ಪ್ಯಾಕ್!

ಶನಿವಾರ, 8 ಜನವರಿ 2022 (16:51 IST)
ವಯಸ್ಸಿನ ಹೊರತಾಗಿಯೂ ವಯಸ್ಕರಲ್ಲಿಯೂ ಸಹ ಬರುತ್ತದೆ. ಇವುಗಳನ್ನು ಕಡಿಮೆ ಮಾಡಲು ಕೆಲವು ಫೇಸ್ ಪ್ಯಾಕ್ಗಳಿವೆ,

ನಿಮ್ಮ ಮುಖದಲ್ಲಿ ಸಹ ಮೊಡವೆಗಳು ಹೆಚ್ಚಿದ್ದರೆ ಈ ಫೇಸ್ಪ್ಯಾಕ್ ನಿಮಗೆ ಸಹಾಯ ಮಾಡುತ್ತದೆ.

ಸಮತೋಲಿತ ಜೀವನಶೈಲಿ, ಉತ್ತಮ ಆಹಾರ ಪದ್ಧತಿ, ಅತ್ಯುತ್ತಮ ತ್ವಚೆಯ ಉತ್ಪನ್ನಗಳನ್ನು ಬಳಸುವುದು ಮೊಡವೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಅದರಲ್ಲಿ ಟೊಮೊಟೊ ಕೂಡ ಒಂದು.

ಟೊಮೆಟೊದಲ್ಲಿ ವಿಟಮಿನ್ ಸಿ ಅಧಿಕವಾಗಿದೆ. ಚರ್ಮದ ಬಣ್ಣವನ್ನು ಸುಧಾರಿಸಲು ಇದು ಉತ್ತಮ. ಇದನ್ನು ಬಳಸುವುದರಿಂದ ಮುಖದ ಮೇಲಿನ ಕಲೆಗಳು, ಮೊಡವೆಗಳಂತಹ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.ಮೊದಲು ಎರಡು ಚಮಚ ಟೊಮೆಟೊ ಪೇಸ್ಟ್ ತೆಗೆದುಕೊಳ್ಳಿ. ಇದಕ್ಕೆ ಸ್ವಲ್ಪ ಜೇನುತುಪ್ಪವನ್ನು ಮಿಶ್ರಣ ಮಾಡಿ.ಮೊದಲು ಮುಖ ಮತ್ತು ಕುತ್ತಿಗೆಯನ್ನು ಸ್ವಚ್ಛಗೊಳಿಸಿ ಮತ್ತು ಮಿಶ್ರಣವನ್ನು ಮುಖಕ್ಕೆ ಹಚ್ಚಿ. ಈ ಪ್ಯಾಕ್ ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಚರ್ಮಕ್ಕೆ ಸಾಕಷ್ಟು ತೇವಾಂಶ ಸಿಗುತ್ತದೆ

ಸ್ವಲ್ಪ ಕಡಲೆ ಹಿಟ್ಟು ತೆಗೆದುಕೊಳ್ಳಿ. ಈಗ ಟೊಮೆಟೊ ಪೇಸ್ಟ್ ಸೇರಿಸಿ. ನಯವಾದ ಪೇಸ್ಟ್ ತಯಾರಿಸಿ. ಈ ಪ್ಯಾಕ್ ಅನ್ನು ಮುಖದ ಮೇಲೆ ಹಚ್ಚಿ. ಒಣಗಿದ ನಂತರ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಮುಖ ಫ್ರೆಶ್ ಆಗಿ ಕಾಣುತ್ತದೆ.

ಸ್ವಲ್ಪ ಮುಲ್ತಾನಿ ಮಣ್ಣನ್ನು ತೆಗೆದುಕೊಳ್ಳಬೇಕು. ಟೊಮೆಟೊ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ. ತಣ್ಣೀರಿನಿಂದ ತೊಳೆಯಿರಿ. ಇದು ಬಿಸಿಲಿನಿಂದ ಟ್ಯಾನ್ ಆದ ಚರ್ಮಕ್ಕೆ ಪರಿಹಾರ ನೀಡುತ್ತದೆ.

ಸ್ವಲ್ಪ ಟೊಮೆಟೊ ರಸವನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಮಜ್ಜಿಗೆಯೊಂದಿಗೆ ಬೆರೆಸಿ ಮತ್ತು ಮಿಶ್ರಣವನ್ನು ಮುಖಕ್ಕೆ ಹಚ್ಚಿ.ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ