ಕತ್ತಿನ ಸುತ್ತಲಿರುವ ಕಪ್ಪು ಕಲೆ ನಿವಾರಣೆಗಿಲ್ಲಿದೆ ಟಿಪ್ಸ್
ಬುಧವಾರ, 13 ಡಿಸೆಂಬರ್ 2017 (08:09 IST)
ಬೆಂಗಳೂರು: ಕೆಲವರಿಗೆ ಕತ್ತಿನ ಸುತ್ತ ಕಪ್ಪು ಕಲೆ, ಮಚ್ಚೆಗಳಿರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಕೆಲವೊಂದು ಜಾಗೃತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಲರ್ಜಿ ಇರುವವರು ರೋಲ್ಡ್ ಗೋಲ್ಡ್ ಆಭರಣಗಳನ್ನು ಧರಿಸದೆ ಇರುವುದು ಒಳ್ಳೆಯದು. ಯಾಕೆಂದರೆ ಇದರಿಂದ ಅಲರ್ಜಿಯಾಗಿ ಕತ್ತಿನ ಚರ್ಮ ಬದಲಾಗುತ್ತದೆ.
ಇಂತಹ ಕಪ್ಪು ಕಲೆಗಳು ಹೋಗಬೇಕೆಂದರೆ 1 ಚಮಚ ಮೊಸರಿಗೆ 4ರಿಂದ 5 ಹನಿ ನಿಂಬೆರಸ ಮಿಶ್ರಣ ಮಾಡಿ ಅದನ್ನು ಕತ್ತಿನ ಸುತ್ತ ಮಸಾಜ್ ಮಾಡಿ 15 ನಿಮಿಷ ಬಿಟ್ಟು ತೊಳೆದರೆ ಕಲೆ ಹೋಗುತ್ತದೆ. ಕೆಲವೊಮ್ಮೆ ಕತ್ತಿನ ಭಾಗದಲ್ಲಿ ಕೊಳೆ ಇರುತ್ತದೆ. ಎಷ್ಟು ತಿಕ್ಕಿದರು ಹೋಗದಿದ್ದಾಗ ಮೊಸರಿಗೆ ಅಕ್ಕಿಹಿಟ್ಟನ್ನು ಮಿಶ್ರಣ ಮಾಡಿ ಕತ್ತಿಗೆ ಹಚ್ಚಿ 5 ನಿಮಿಷದ ನಂತರ ಮಸಾಜ್ ಮಾಡಿ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದರೆ ಕೊಳೆ ಹೋಗುತ್ತದೆ.
ಹಾಗೆ ಪಪ್ಪಾಯಿ ಹಣ್ಣು ಅಥವಾ ಎಲೆಯನ್ನುಕಿತ್ತಾಗ ಅದರಿಂದ ಬರುವ ಹಾಲನ್ನು ಕತ್ತಿನಲ್ಲಿ ಇರುವ ಮಚ್ಚೆಗಳ ಮೇಲೆ ಹಾಕಿದರೆ 2,3 ದಿನಗಳಲ್ಲಿ ಅದು ಉದುರಿ ಹೋಗುತ್ತದೆ. ಆದರೆ ಮಾಮೂಲಿ ಜಾಗಕ್ಕೆ ತಾಗದಂತೆ ಹಾಕಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ