ಮುಖಕ್ಕೆ ಹಚ್ಚಿದ ಮೇಕಪ್ ತೆಗೆಯದೇ ಮಲಗಿದರೆ ಏನೆಲ್ಲಾ ಸಮಸ್ಯೆ ಉಂಟಾಗುತ್ತೆ ಗೊತ್ತಾ...?
ಮಂಗಳವಾರ, 30 ಜನವರಿ 2018 (06:40 IST)
ಬೆಂಗಳೂರು : ನೈಟ್ ಫಂಕ್ಷನ್ ಅಥವಾ ಪಾರ್ಟಿಗೆ ಹೋಗಿ ಬಂದಾಗ ತುಂಬಾ ಸುಸ್ತು ಅನಿಸುತ್ತಿರುತ್ತದೆ. ಒಮ್ಮೆ ಮಲಗಿದರೆ ಸಾಕು ಎಂದು ಅನಿಸಿ ಬಿಟ್ಟಿರುತ್ತದೆ, ಮುಖಕ್ಕೆ ಹಚ್ಚಿದ ಮೇಕಪ್ ತೆಗೆಯದೆ ಹಾಗೆಯೇ ಮಲಗಿ ಬಿಡುತ್ತೇವೆ. ಆದರೆ ಈ ತಪ್ಪನ್ನು ಮಾಡುವುದರಿಂದ ನಮ್ಮ ಸೌಂದರ್ಯದ ಮೇಲೆ ಈ ರೀತಿಯ ಅಡ್ಡ ಪರಿಣಾಮ ಬೀರುವುದು.
ಫಂಕ್ಷನ್‌ಗೆ ಹೊರಡುವಾಗ ಹಚ್ಚಿದ ಐ ಶ್ಯಾಡೋ, ಐ ಲೈನರ್ ಇವುಗಳನ್ನು ಮಲಗುವ ಮುನ್ನ ತೆಗೆಯದೆ ಮಲಗಿದರೆ ಕಣ್ಣಿನಲ್ಲಿ ತುರಿತ ಉಂಟಾಗುವುದು.
ಮೇಕಪ್‌ನಲ್ಲಿಯೇ ಮಲಗುವುದರಿಂದ ಬ್ಲ್ಯಾಕ್‌ಹೆಡ್ಸ್ ಸಮಸ್ಯೆ ಕಂಡು ಬರುವುದು.