ಇಂಗು ಬೇರಿಸಿದ ನೀರು ಸೇವಿಸುವುದರಿಂದ ಇಷ್ಟೆಲ್ಲಾ ಪ್ರಯೋಜನವಿದೆಯಂತೆ!

ಸೋಮವಾರ, 29 ಜನವರಿ 2018 (07:26 IST)
ಬೆಂಗಳೂರು : ಹಿಂಗು ಅಥವಾ ಇಂಗು, ಇದು ಅತ್ಯಂತ ಪ್ರಾಚೀನವಾದ ಸಂಬಾರು ಪದಾರ್ಥ. ಇದನ್ನು ಆಹಾರದಲ್ಲಿ ಬಳಸಿದರೆ ಅದರ ರುಚಿ ಹೆಚ್ಚುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಭಾರತ ಮತ್ತು ನೇಪಾಳದಲ್ಲಿ ಇದನ್ನು ಔಷಧಿಯಾಗಿಯೂ ಬಳಕೆ ಮಾಡುತ್ತಾರೆ.


ಆಯುರ್ವೇದದ ಪ್ರಕಾರ, ಉಗುರು ಬೆಚ್ಚಗಿನ ನೀರಿನಲ್ಲಿ ಒಂದು ಚಿಟಿಕೆಯಷ್ಟು ಹಿಂಗನ್ನು ಹಾಕಿ ನಿತ್ಯ ಸೇವಿಸುವುದರಿಂದ 7 ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅವು ಯಾವುವೆಂದರೆ,
  1. ಹಿಂಗು ಬೆರೆಸಿದ ನೀರು ಹೊಟ್ಟೆಯ ಉರಿಯನ್ನು ಕಡಿಮೆ ಮಾಡುವ (anti-inflammatory) ಗುಣಗಳನ್ನು ಹೊಂದಿದೆ. ಅಸಿಡಿಟಿ ಹಾಗೂ ಅಜೀರ್ಣ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

  1. 2. ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ ಹಾಗೂ ಮಧುಮೇಹವನ್ನು ತಡೆಯಬಹುದು.

    3. ಹಿಂಗನ್ನು ನೀರಿನಲ್ಲಿ ಕುದಿಸಿದಾಗ, ಅದರಲ್ಲಿನ ಮೂತ್ರವರ್ಧಕ ಗುಣಗಳು ಬಿಡುಗಡೆಯಾಗುತ್ತವೆ. ಇದು ಮೂತ್ರಕೋಶ ಹಾಗೂ ಕಿಡ್ನಿಯನ್ನು ಸ್ವಚ್ಛಗೊಳಿಸಿ ಮೂತ್ರ ಸಂಬಂಧಿ ಸೋಂಕುಗಳನ್ನು ನಿವಾರಿಸುತ್ತದೆ.

  1. 4. ನಿತ್ಯ ಸೇವಿಸುವುದರಿಂದ ಮೂಳೆಗಳು ದೃಢವಾಗುತ್ತವೆ.

    5. ಇದರಲ್ಲಿನ ಆಂಟಿಬ್ಯಾಕ್ಟೀರಿಯಲ್ ಗುಣಗಳು ಅಸ್ತಮಾ ಬಾರದಂತೆ ತಡೆಯುತ್ತವೆ.

  1. 6. ಹಿಂಗಿನಲ್ಲಿ ಬೀಟಾ ಕೆರೋಟಿನ್ ಇರುತ್ತದೆ. ಇದರಿಂದ ಕಣ್ಣುಗಳ ಆರೋಗ್ಯ ಚೆನ್ನಾಗಿರುತ್ತದೆ. ಕಣ್ಣುಗಳು ಆರೋಗ್ಯವಾಗಿ ಹಾಗೂ ತೇವಾಂಶದಿಂದ ಕೂಡಿರುತ್ತವೆ.

  1. 7. ಹಿಂಗಿನಲ್ಲಿನ ಆಂಟಿಆಕ್ಸಿಡೆಂಟ್‌ಗಳು ರಕ್ತಹೀನತೆಯನ್ನು ತಡೆಯುತ್ತವೆ. ನಮ್ಮ ಹಲ್ಲುಗಳು ದೃಢವಾಗಿರುತ್ತವೆ. ದೇಹದಲ್ಲಿನ ಕ್ಯಾನ್ಸರ್ ಕಾರಕ ಅಂಶಗಳನ್ನು ನಿವಾರಿಸಿ ಕ್ಯಾನ್ಸರ್ ಬಾರದಂತೆ ತಡೆಯುತ್ತದೆ.
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ