ಮೊಟ್ಟೆಯನ್ನು ಹಸಿಯಾಗಿ ಕುಡಿಯುವುದರಿಂದ ಏನಾಗುತ್ತೆ ಗೊತ್ತಾ...?

ಮಂಗಳವಾರ, 30 ಜನವರಿ 2018 (06:29 IST)
ಬೆಂಗಳೂರು : ಮೊಟ್ಟೆಯಿಂದ ನಾವು ನಾನಾ ರೀತಿಯ ಅಡುಗೆಗಳನ್ನು ಮಾಡಿಕೊಳ್ಳುತ್ತೇವೆ. ಅಲ್ಲದೆ ಮೊಟ್ಟೆಯನ್ನು ಬೇಯಿಸಿ ಸಹ ತಿನ್ನುತ್ತೇವೆ. ಆದರೆ ಇದ್ಯಾವುದೂ ಅಲ್ಲದೆ ಕೆಲವರು ಮೊಟ್ಟೆಯನ್ನು ಹಾಗೆಯೇ ಹೊಡೆದು ಹಸಿಯಾಗಿ ಕುಡಿಯುತ್ತಾರೆ.ಇದು ಆರೋಗ್ಯಕ್ಕೆ ಒಳ್ಳೆಯದೇ ಎಂಬುದನ್ನು ಮೊದಲು ತಿಳಿದುಕೊಳ್ಳಿ.

 
ಹಸಿಕೋಳಿ ಮೊಟ್ಟೆಯಲ್ಲಿ ಸಾಲ್ಮೋನೆಲ್ಲಾ ಎಂಬ ಒಂದು ವಿಧವಾದ ಬ್ಯಾಕ್ಟೀರಿಯಾ ಇರುತ್ತದೆ. ಇದು ಯಾವುದೇ ಮೊಟ್ಟೆಯಲ್ಲಾದರೂ ಅತ್ಯಲ್ಪ ಪ್ರಮಾಣದಲ್ಲಿ ಇರುತ್ತದೆ. ಹಾಗಾಗಿ ಮೊಟ್ಟೆಯನ್ನು ಬೇಯಿಸಿ, ಅಥವಾ ಪಲ್ಯ ಮಾಡಿಕೊಂಡು ತಿಂದರೆ ಆ ಬ್ಯಾಕ್ಟೀರಿಯಾ ಸಾಯುತ್ತದೆ. ಅದರಿಂದ ನಮಗೆ ಯಾವುದೇ ತೊಂದರೆಯಾಗಲ್ಲ. ಆದರೆ ಮೊಟ್ಟೆಯನ್ನು ಹಾಗೆಯೇ ಹಸಿಯಾಗಿ ಕುಡಿದರೆ ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ನಮ್ಮ ದೇಹದೊಳಕ್ಕೆ ಪ್ರವೇಶಿಸುತ್ತದೆ. ಆ ಬ್ಯಾಕ್ಟೀರಿಯಾ ಕಡಿಮೆ ಪ್ರಮಾಣದಲ್ಲಿ ಇರುತ್ತದೆಯಾದರೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಹಸಿ ಮೊಟ್ಟೆ ಕುಡಿಯುವುದರಿಂದ ತೊಂದರೆಯಾಗುತ್ತದೆ.. ಸೋಂಕು, ಜ್ವರ ಬರುತ್ತದೆ. ಹಾಗೆ ಹಸಿ ಮೊಟ್ಟೆಯನ್ನು ಪ್ರತಿದಿನ ಕುಡಿಯಬಾರದು. ಯಾಕೆಂದರೆ ಅವರಲ್ಲಿ ಬಯೋಟಿನ್ ಎಂಬ ಪೋಷಕ ಪದಾರ್ಥದ ಲೋಪ ಸಂಭವಿಸುತ್ತದೆ. ಇದರಿಂದ ಚರ್ಮದ ಮೇಲೆ ತುರಿಕೆ, ಕೂದಲು ಉದುರುವುದು, ನರಗಳ ದೌರ್ಬಲ್ಯದಂತಹ ಸಮಸ್ಯೆಗಳು ಉಂಟಾಗುತ್ತವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ