ಪುದೀನಾ ಸೊಪ್ಪು ಬಳಸಿ ಕಲೆ ನಿವಾರಿಸಲು ಹೀಗೆ ಮಾಡಿ

Krishnaveni K

ಸೋಮವಾರ, 6 ಮೇ 2024 (11:37 IST)
Photo Courtesy: Twitter
ಬೆಂಗಳೂರು: ಮುಖದಲ್ಲಿ ಕಾಣುವ ಸಣ್ಣ ಕಲೆಗಳು ನಮ್ಮ ಸೌಂದರ್ಯ ಹಾಳು ಮಾಡುತ್ತದೆ. ಹಾಗಿದ್ದರೆ ಪುದೀನಾ ಎಲೆ ಬಳಸಿ ಮಾಡುವ ಒಂದು ಸಿಂಪಲ್ ಫೇಸ್ ಪ್ಯಾಕ್ ನಿಂದ ಕಲೆ ನಿವಾರಿಸಬಹುದು. ಅದು ಹೇಗೆ ಎಂದು ನೋಡೋಣ.

ನಿಮ್ಮ ಸೌಂದರ್ಯದ ರೊಟೀನ್ ಗೆ ಪುದೀನಾ ಸೊಪ್ಪನ್ನು ಪರಿಣಾಮಕಾರಿಯಾಗಿ ಬಳಸಬಹುದು. ಪುದೀನಾ ಸೊಪ್ಪು ವಿಟಮಿನ್ ಸಿ, ಆಂಟಿ ಆಕ್ಸಿಡೆಂಟ್ ಗಳನ್ನು ಹೇರಳವಾಗಿ ಹೊಂದಿದ್ದು ಇದು ಕಲೆ ನಿವಾರಣೆ, ಮೊಡವೆ ಸಮಸ್ಯೆ ನಿವಾರಣೆ ಮಾಡಿ ಮುಖದ ಕಾಂತಿ ಹೆಚ್ಚಾಗುವಂತೆ ಮಾಡುತ್ತದೆ. ಪುದೀನಾ ಸೊಪ್ಪು ಮತ್ತು ಹಳದಿ ಬಳಸಿ ಮಾಡುವ ಫೇಸ್ ಪ್ಯಾಕ್ ವಿಧಾನ ನೋಡೋಣ.

ಪುದೀನಾ ಫೇಸ್ ಪ್ಯಾಕ್ ಗೆ ಬೇಕಾಗುವ ಸಾಮಗ್ರಿಗಳು
ಪುದೀನಾ ಸೊಪ್ಪು10-15 ಎಲೆಗಳು
ಚಿಟಿಕೆ ಅರಶಿನ

ಮಾಡುವ ವಿಧಾನ
ಸ್ವಲ್ಪವೇ ಸ್ವಲ್ಪ ನೀರು ಸೇರಿಸಿ ಪುದೀನಾ ಎಲೆಗಳನ್ನು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.
ಈ ಪೇಸ್ಟ್ ಗೆ ಅರಶಿನವನ್ನು ಮಿಕ್ಸ್ ಮಾಡಿ ಚೆನ್ನಾಗಿ ಕಲಕಿ ಹದಗೊಳಿಸಿ
ನಂತರ ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ ಕೆಲವು ಹೊತ್ತು ಹಾಗೇ ಬಿಡಿ. ಬಳಿಕ ಕೂಲ್ ನೀರಿನಿಂದ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ.

ಈ ರೀತಿ ನಿಯಮಿತವಾಗಿ ಮಾಡುತ್ತಿದ್ದರೆ ಮುಖದಲ್ಲಿ ಮೊಡವೆ ಸಮಸ್ಯೆ, ವಯಸ್ಸಾದಂತೆ ಬರುವ ಕಲೆ ಸಮಸ್ಯೆ ಇತ್ಯಾದಿಗಳನ್ನು ಹೋಗಲಾಡಿಸಿ ಮುಖ ಕಾಂತಿಯುತವಾಗಿರುವಂತೆ ನೋಡಿಕೊಳ್ಳುತ್ತದೆ. ಇದೇ ರೀತಿ ಪುದೀನಾ ಎಲೆ ಜೊತೆ ಅರಶಿನದ ಬದಲು ಸೌತೆಕಾಯಿಯನ್ನು ಪೇಸ್ಟ್ ಮಾಡಿ ಫೇಸ್ ಪ್ಯಾಕ್ ಮಾಡಿಕೊಳ್ಳಬಹುದು. ಇದೂ ಕೂಡಾ ಪರಿಣಾಮಕಾರಿ ಹೋಂ ಮೇಡ್ ಫೇಸ್ ಪ್ಯಾಕ್ ಆಗಿದೆ. ಮಾಡಿ ನೋಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ