ಕೂದಲು ಒದ್ದೆಯಾಗಿರುವಾಗ ನಾವು ಯಾವತ್ತೂ ಬಾಚಲು ಹೋಗಬಾರದು. ಕೂದಲು ಒದ್ದೆಯಾಗಿರುವಾಗ ಬಾಚಿಕೊಂಡರೆ ತಲೆಹೊಟ್ಟು ಬರುವ ಸಾಧ್ಯತೆ ಹೆಚ್ಚು. ಅಲ್ಲದೆ ಕೂದಲುಗಳನ್ನು ಕಟ್ಟಿಕೊಳ್ಳುವುದರಿಂದ ಸರಿಯಾಗಿ ನೀರಿನಂಶ ಹೋಗದೇ ಕೆಟ್ಟ ವಾಸನೆ ಬರಬಹುದು. ಅಲ್ಲದೆ ಕೂದಲು ಉದುರುವ ಸಮಸ್ಯೆಯೂ ಬರಬಹುದು.
ತಲೆಸ್ನಾನ ಮಾಡಿ ಬಂದ ತಕ್ಷಣ ಫ್ಯಾನ್ ಹಾಕಿ ಕೂದಲು ಒಣಗಿಸಬೇಡಿ. ಇದರಿಂದ ತಲೆನೋವಿನಂತಹ ಸಮಸ್ಯೆ ಬರಬಹುದು. ಇಲ್ಲವೇ ಕೂದಲು ಅತಿಯಾಗಿ ಡ್ರೈ ಆಗುವುದರಿಂದ ತಲೆಹೊಟ್ಟು, ಸೀಳು ಕೂದಲಿನ ಸಮಸ್ಯೆ ಬರಬಹುದು. ಒದ್ದೆ ಕೂದಲಿರುವಾಗ ತಲೆ ಬಾಚಿಕೊಂಡರೆ ಸಿಕ್ಕು ಬರುವ ಸಾಧ್ಯತೆ ಹೆಚ್ಚು.
ತಲೆನೋವಿನ ಸಮಸ್ಯೆ ಇರುವವರು ಒದ್ದೆ ಕೂದಲಿರುವಾಗ ಒಣಗಿಸಿಕೊಳ್ಳದೇ ಬಿಸಿಲಿಗೆ ಓಡಾಡಿದರೆ ತಲೆನೋವು ಬರುವ ಸಾಧ್ಯತೆಯಿದೆ. ಜೊತೆಗೆ ಒದ್ದೆ ಕೂದಲಿನಲ್ಲಿ ಹೊರಗೆ ಓಡಾಡುವುದರಿಂದ ಶೀತ ಪ್ರಕೃತಿಯವರಿಗೆ ಬೇಗನೇ ನೆಗಡಿ, ಕೆಮ್ಮು ಇತ್ಯಾದಿ ಸಮಸ್ಯೆ ಆರಂಭವಾಗಬಹುದು.