ಮುಖದ ಮೇಲೆ ಮೊಡವೆಗಳು ಏಕೆ ಏಳುತ್ತವೆ ಗೊತ್ತಾ...?

ಶನಿವಾರ, 24 ಫೆಬ್ರವರಿ 2018 (07:12 IST)
ಬೆಂಗಳೂರು : ಮೊಡವೆ ಏಕೆ ಬರುತ್ತದೆ ಎಂಬ ಪ್ರಶ್ನೆಗೆ ಹೊಸ ಅಧ್ಯಯನವೊಂದು ಉತ್ತರ ಕಂಡುಕೊಂಡಿದೆ. ಮೊಡವೆ ಹಾಗೂ ಇತರ ಕೆಲ ಚರ್ಮದ ಸೋಂಕಿಗೆ ಕಾರಣವಾಗುವ ಪ್ರೋಪಿಯೋನಿ ಬ್ಯಾಕ್ಟೀರಿಯಮ್ ಏಕ್ನಿಸ್'ಗೆ ಆಮ್ಲಜನಕದ ಕೊರತೆ ಉಂಟಾದಾಗ ಮೊಡವೆಗಳಾಗುತ್ತವೆ ಎಂಬುದು ಈ ಅಧ್ಯಯನದಿಂದ ತಿಳಿದುಬಂದಿದೆ.


ಈ ಬ್ಯಾಕ್ಟೀರಿಯಾಗಳು ನಮ್ಮ ಚರ್ಮದ ಮೇಲೆ ಯಾವಾಗಲೂ ಇರುತ್ತವಾದರೂ ಸಾಮಾನ್ಯವಾಗಿ ನಿರುಪದ್ರವಿಗಳಾಗಿರುತ್ತವೆ. ಆದರೆ, ಚರ್ಮದ ಕೋಶಗಳು ಹಾಗೂ ಕೂದಲಿನಲ್ಲಿ ಗಾಳಿ ಆಡದ ಸ್ಥಿತಿ ನಿರ್ಮಾಣವಾದಾಗ ಈ ಬ್ಯಾಕ್ಟೀರಿಯಾಗಳು ರೊಚ್ಚಿಗೇಳುತ್ತವೆ. ನಮ್ಮ ಚರ್ಮದಲ್ಲಿ ಕಂಡುಬರುವ ಸಿರಮ್ ಎಂಬ ಎಣ್ಣೆಯನ್ನು ಈ ಬ್ಯಾಕ್ಟೀರಿಯಾ ಫ್ಯಾಟಿ ಆಸಿಡ್'ಗಳಾಗಿ ಪರಿವರ್ತಿಸುತ್ತದೆ. ಇದರೊಂದಿಗೆ ಹತ್ತಿರದ ಚರ್ಮ ಕೋಶಗಳು ಊದಿಕೊಳ್ಳುತ್ತವೆ. ದೇಹದಲ್ಲಿರುವ ಹಿಸ್ಟೋನ್ಸ್ ಎಂಬ ಗ್ರಂಥಿಗಳು ಈ ಊತವನ್ನು ಕಡಿಮೆ ಮಾಡಲು ಸ್ವಾಭಾವಿಕವಾಗಿ ಯತ್ನಿಸುತ್ತವಾದರೂ ಬ್ಯಾಕ್ಟೀರಿಯಾಗಳು ಉತ್ಪಾದಿಸುವ ಫ್ಯಾಟಿ ಆಸಿಡ್'ಗಳ ಮುಂದೆ ಅವುಗಳ ಆಟ ಸಾಗುವುದಿಲ್ಲ. ಹೀಗಾಗಿ, ಊತ ಕಡಿಮೆ ಆಗುವುದಿಲ್ಲ. ಚರ್ಮದ ಮೇಲೆ ತುರಿಕೆ ತರುವಂತಹ ಕೆಂಪಗಿನ ಗುಳ್ಳೆಗಳೇಳುತ್ತವೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ