ಮೊಡವೆ ಸಮಸ್ಯೆಗೆ ಬೇಕಿಂಗ್ ಸೋಡಾ ಬಳಸಿ ಈ ಮನೆ ಮದ್ದು ಮಾಡಿ

ಶುಕ್ರವಾರ, 16 ಫೆಬ್ರವರಿ 2018 (08:00 IST)
ಬೆಂಗಳೂರು: ಮೊಡವೆ ಸಮಸ್ಯೆ ಎಲ್ಲಾ ಹದಿಹರೆಯದವರಿಗೂ ಕಾಡುವ ಸಮಸ್ಯೆಯೇ. ಇದರ ಪರಿಹಾರಕ್ಕೆ ಬೇಕಿಂಗ್ ಸೋಡಾ ಬಳಸಿ ಒಂದು ಮನೆ ಮದ್ದು ಮಾಡಿ ನೋಡಿ.
 

ಅದಕ್ಕೆ ಬೇಕಾಗಿರುವುದು ಬೇಕಿಂಗ್ ಸೋಡಾ ಮತ್ತು ಹದ ಬಿಸಿ ನೀರು. ಒಂದು ಟೇಬಲ್ ಸ್ಪೂನ್ ಬೇಕಿಂಗ್ ಸೋಡಾಕ್ಕೆ ಅಷ್ಟೇ ಪ್ರಮಾಣದಲ್ಲಿ ಹದ ಬಿಸಿನೀರು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ.

ಈ ಪೇಸ್ಟ್ ನ್ನು ಮೊಡವೆಗಳಿರುವ ಜಾಗಕ್ಕೆ ಹಚ್ಚಿಕೊಂಡು 15 ನಿಮಿಷ ಬಿಡಿ. ನಂತರ ಶುದ್ಧ ನೀರಿನಿಂದ ಮುಖ ತೊಳೆದುಕೊಳ್ಳಿ. ಈಗ ಕೀವು ಆದಂತಹ ಮೊಡವೆಗಳು ತೆರೆದುಕೊಳ್ಳುತ್ತವೆ. ಈಗ ಐಸ್ ಕ್ಯೂಬ್ ಬಳಸಿಕೊಂಡು ಆ ಭಾಗಕ್ಕೆ ಮೃದುವಾಗಿ ಮಸಾಜ್ ಮಾಡಿ. ಒಂದು ವೇಳೆ ಈ ಥೆರಪಿ ನಂತರ ಚರ್ಮ ಒಣ ಎನಿಸಿದರೆ ಸ್ವಲ್ಪ ಮಾಯಿಶ್ಚರೈಸ್ ಕ್ರೀಂ ಬಳಸಿ. ಹೀಗೇ ವಾರಕ್ಕೆರಡು ಬಾರಿ ಮಾಡುತ್ತಿದ್ದರೆ ಮೊಡವೆಗೆ ಪರಿಹಾರ ಸಿಗಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ