ದೇವರ ಪ್ರಾರ್ಥನೆ ವೇಳೆ ಅಗರಬತ್ತಿ ಉರಿಸುವುದೇಕೆ?
ದೇವರಿಗೆ ಮಂತ್ರ ಹೇಳುವಾಗ ವಿವಿಧ ಅಲಂಕಾರಗಳಲ್ಲಿ ದೀಪ, ಧೂಪ ಸೇವೆ ಎನ್ನುತ್ತೇವೆ. ಧೂಪವಾಗಿ ಅಗರಬತ್ತಿಯನ್ನು ಬಳಸಲಾಗುತ್ತದೆ. ದೇವರ ಸುತ್ತಮುತ್ತ ಒಂದು ರೀತಿಯ ಸೌಗಂಧ ವಾತಾವರಣ ನೆಲೆಯಾಗಿದ್ದರೆ ಅಲ್ಲಿ ಶುದ್ಧ ಗಾಳಿ, ನೈರ್ಮಲ್ಯ ಹರಿಯುತ್ತದೆ ಎಂಬ ಕಾರಣಕ್ಕೆ ಅಗರಬತ್ತಿ ಉರಿಸಲಾಗುತ್ತದೆ.