ಮಾನಸಿಕ ನೆಮ್ಮದಿ ಹಾಳಾಗಿದ್ದರೆ ಈ ಮಂತ್ರವನ್ನು ಜಪಿಸಿ

ಸೋಮವಾರ, 31 ಡಿಸೆಂಬರ್ 2018 (09:10 IST)
ಬೆಂಗಳೂರು: ಆಧುನಿಕ ಜೀವನ ಶೈಲಿಯಿಂದಾಗಿ ಮನುಷ್ಯ ಬೇಗನೇ ಒತ್ತಡಕ್ಕೊಳಗಾಗುತ್ತಾನೆ. ಹಾಗೆಯೇ ಮಾನಸಿಕ ರೋಗಗಳಿಗೆ ಬಲಿಯಾಗುತ್ತಿದ್ದಾನೆ. ಹೀಗಾಗಿ ಮನಸ್ಸಿಗೆ ಧೈರ್ಯ, ಆತ್ಮವಿಶ್ವಾಸ ತುಂಬಬೇಕಾದರೆ ಧಾರ್ಮಿಕವಾಗಿ ಏನು ಮಾಡಬೇಕು ಗೊತ್ತಾ?


ಗುರುಗ್ರಹ ನಮ್ಮಲ್ಲಿ ಶಕ್ತಿ, ಆತ್ಮಸ್ಥೈರ್ಯ ತುಂಬುತ್ತದೆ. ಅದಕ್ಕಾಗಿ ಪ್ರತಿ ನಿತ್ಯ ಬೃಹಸ್ಪತಿ ಮಂತ್ರ ಮತ್ತು ಗುರು ಬೀಜ ಮಂತ್ರವನ್ನು ಜಪಿಸುತ್ತಿರಬೇಕು. ಭಕ್ತಿಯಿಂದ ಈ ಮಂತ್ರವನ್ನು ಹೇಳಿದರೆ ಮನಸ್ಸಿಗೆ ಧೈರ್ಯ, ನೆಮ್ಮದಿ ತುಂಬಿ ಬೇಡದ ಆಲೋಚನೆಗಳು, ಭಯ ದೂರವಾಗುತ್ತದೆ. ಜೀವನದಲ್ಲಿ ಯಶಸ್ಸು ಪಡೆಯುತ್ತೀರಿ.

ಬೃಹಸ್ಪತಿ ಮಂತ್ರ ಹೀಗಿದೆ:
ದೇವಾನಾಂ ಸ ರಿಶೀನಾಂ ಗುರುಂ ಕಾಂಚನ-ಸನ್ನಿಭಂ
ಬುದ್ಧಿ ಭೂತಾಂ ತ್ರಿ ಲೋಕೇಶಾಂ ತಾಂ ನಮಾಮಿ ಬೃಹಸ್ಪತಿಂ

ಗುರು ಬೀಜ ಮಂತ್ರ:
ಓಂ ಗ್ರಾಂ ಗ್ರೀಂ ಗ್ರೌಂ ಸಃ ಬೃಹಸ್ಪತಯೇ ನಮಃ
ಓಂ ಭ್ರಿಂ ಬೃಹಸ್ಪತಯೆ ನಮಃ
ಓಂ ಗ್ರಾಂ ಗ್ರೀಂ ಗ್ರೌಂ ಸಃ ಗುರವೇ ನಮಃ

ಈ ಮಂತ್ರಗಳನ್ನು ಪ್ರತಿನಿತ್ಯ ಭಕ್ತಿಯಿಂದ ಜಪಿಸುತ್ತಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ