Maha Shivaratri special: ಬಿಲ್ವ ಪತ್ರೆ ಅಥವಾ ಕಾಯಿಯನ್ನು ಮುರಿಯಬಾರದು

Krishnaveni K

ಗುರುವಾರ, 7 ಮಾರ್ಚ್ 2024 (08:40 IST)
Photo Courtesy: Social Media
ಬೆಂಗಳೂರು: ಭಗವಾನ್ ಶಿವನಿಗೆ ಅತ್ಯಂತ ಪ್ರಿಯವಾದ ಹೂ ಎಂದರೆ ಅದು ಬಿಲ್ವಪತ್ರೆ. ಬಿಲ್ವ ಮರವನ್ನು ಹಿಂದೂಗಳು ಅಷ್ಟೇ ಪೂಜ್ಯನೀಯ ಭಾವದಲ್ಲಿ ನೋಡುತ್ತಾರೆ. ಶಿವರಾತ್ರಿ ಸಂದರ್ಭದಲ್ಲಿ ಬಿಲ್ವ ಪತ್ರೆ ಕಾಯಿ ಮತ್ತು ಟೊಂಗೆಯನ್ನು ಮುರಿಯಬಾರದು ಯಾಕೆ ಎಂದು ನೋಡೋಣ.

ಬಿಲ್ವ ಪತ್ರೆಯ ಸೊಪ್ಪು ಮತ್ತು ಫಲದಲ್ಲಿ ಅನೇಕ ಔಷಧೀಯ ಗುಣಗಳಿವೆ ಎಂದು ಅಯುರ್ವೇದವೇ ಹೇಳುತ್ತದೆ. ಇದನ್ನು ಬಳಸಿ ಆಯುರ್ವೇದದಲ್ಲಿ ಅನೇಕ ಔಷಧಿ ತಯಾರಿಸಲಾಗುತ್ತದೆ. ಎಷ್ಟೋ ಸಾಮಾನ್ಯ ರೋಗಗಳಿಗೆ ಬಿಲ್ವ ಪತ್ರೆ ಔಷಧಿಯಾಗಿ ಬಳಕೆಯಾಗುತ್ತದೆ. ಈ ಸೊಪ್ಪಿಗೆ ಶಿವನ ಆಶೀರ್ವಾದವಿದೆ ಎಂಬುದಕ್ಕೆ ಇದೇ ಸಾಕ್ಷಿ.

ಸಾಮಾನ್ಯವಾಗಿ ನಾವು ಮೂರು ಎಲೆಗಳಿರುವ ಬಿಲ್ವ ಪತ್ರೆಯನ್ನು ಪೂಜೆಗೆ ಬಳಸುತ್ತೇವೆ. ಆದರೆ ಮರದಲ್ಲಿ ಬಿಡುವ ಕಾಯಿಯಲ್ಲೂ ಅನೇಕ ವಿಶೇಷತೆಗಳಿವೆ. ಬಿಲ್ವ ಮರದ ಫಲದಲ್ಲಿ ಮೂರು ಕಣ್ಣುಗಳನ್ನು ನೋಡಬಹುದು. ಇದು ಶಿವನ ಮೂರು ಕಣ್ಣುಗಳನ್ನು ಸೂಚಿಸುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ.

ಈ ಹಣ್ಣನ್ನು ಮತ್ತು ಇದರ ಟೊಂಗೆಯನ್ನು ನಾವು ವಿನೋದಕ್ಕಾಗಿ ಮುರಿಯುವುದು ಮಾಡಬಾರದು. ಯಾಕೆಂದರೆ ಇದರಲ್ಲಿ ಸ್ವತಃ ಶಿವನ ಅಂಶವಿದೆ ಎಂದೇ ನಂಬಲಾಗುತ್ತದೆ. ಇದರ ಮರಕ್ಕೆ ಅಥವಾ ಫಲಕ್ಕೆ ಹಾನಿ ಮಾಡುವುದು ಶಿವನಿಗೆ ಅಪಮಾನ ಮಾಡಿದಂತೆ. ಹೀಗಾಗಿ ಇದನ್ನು ಮುರಿದರೆ ಶಿವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಹಾಗಾಗಿ ಔಷಧಿಯ ಹೊರತಾಗಿ ಅನಗತ್ಯವಾಗಿ ಬಿಲ್ವ ಮರದ ಟೊಂಗೆ ಅಥವಾ ಕಾಯಿಯನ್ನು ಮುರಿಯಲು ಹೋಗಬೇಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ