ದೇವರಿಗೆ ಬಳಸುವ ಹೂ ಹೇಗಿರಬೇಕು?

ಶುಕ್ರವಾರ, 14 ಡಿಸೆಂಬರ್ 2018 (08:44 IST)
ಬೆಂಗಳೂರು: ಪ್ರತಿನಿತ್ಯ ದೇವರಿಗೆ ಹೂ ಬಳಸಿ ಪೂಜೆ ಮಾಡುವ ಪದ್ಧತಿ ಬಹುತೇಕ ಎಲ್ಲರ ಮನೆಯಲ್ಲಿ ಇರುತ್ತದೆ. ಅಲಂಕಾರ ಪ್ರಿಯ ದೇವರಿಗೆ ವಿವಿಧ ಹೂಗಳಿಂದ ಅಲಂಕರಿಸಿದರೆ ಆತ ಪ್ರಸನನ್ನಾಗುತ್ತಾನೆ ಎಂಬುದು ನಂಬಿಕೆ.


ಆದರೆ ದೇವರಿಗೆ ಬಳಸುವ ಹೂವು ಹೇಗಿರಬೇಕು ಎಂಬುದೂ ಮುಖ್ಯ. ಬಾಡಿದ, ಒಣಗಿದ, ನೆಲಕ್ಕೆ ಬಿದ್ದ ಹೂವುಗಳನ್ನು ದೇವರಿಗೆ ಬಳಸಬಾರದು. ಒಂದು ವೇಳೆ ತುಂಬಾ ಎತ್ತರದ ಮರದಲ್ಲಿದ್ದ ಹೂವು ನೆಲಕ್ಕೆ ಬಿದ್ದು ಅದನ್ನು ಬಳಸುವುದಿದ್ದರೆ ಅದಕ್ಕೆ ಮೊದಲು ಅದನ್ನು ಶುದ್ಧ ನೀರಿನಲ್ಲಿ ತೊಳೆದುಕೊಂಡು ದೇವರಿಗೆ ಅರ್ಪಿಸಬೇಕು.

ಇನ್ನು, ಸ್ಮಶಾನ ಗಿಡಗಳಿಂದ ತಂದ ಹೂವುಗಳನ್ನು ದೇವರಿಗೆ ಅರ್ಪಿಸಬಾರದು. ಅದೇ ರೀತಿ ದೇವರಿಗೆ ಅರ್ಪಿಸುವ ಮೊದಲು ಅದರ ಸುವಾಸನೆಯನ್ನು ನಾವು ಆಘ್ರಾಣಿಸಬಾರದು. ಅಷ್ಟೇ ಅಲ್ಲದೆ, ಕುಸುಮವಿಲ್ಲದ ಹೂವುಗಳನ್ನು ಬಳಸುವುದು ತಪ್ಪು. ಸಾಮಾನ್ಯವಾಗಿ ದೇವಿಗೆ ಕೆಂಪು ಹೂವುಗಳಿಂದ ಅಲಂಕಾರ ಮಾಡಿದರೆ ಚೆನ್ನ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ