ರಾತ್ರಿ ವೇಳೆ ಉಗುರು ಕತ್ತರಿಸಬಾರದು ಎನ್ನುವುದೇಕೆ?

ಗುರುವಾರ, 13 ಡಿಸೆಂಬರ್ 2018 (09:09 IST)
ಬೆಂಗಳೂರು: ರಾತ್ರಿ ವೇಳೆ ಉಗುರು ಕತ್ತರಿಸಿದರೆ ಮುಂದಿನ ಜನ್ಮದಲ್ಲಿ ಹಂದಿಯಾಗಿ ಹುಟ್ತೀಯಾ ಅಂತ ಮನೆಯಲ್ಲಿ ಹಿರಿಯರು ಹೆದರಿಸುವುದು ಕೇಳಿರುತ್ತೀರಿ. ಆದರೆ ನಿಜವಾಗಿಯೂ ರಾತ್ರಿ ಉಗುರು ಕತ್ತರಿಸಬಾರದು ಎನ್ನುವುದೇಕೆ?


ವೈಜ್ಞಾನಿಕವಾಗಿ ನೋಡುವುದಾದರೆ ರಾತ್ರಿ ವೇಳೆ ಮನೆಯೊಳಗೆ ಉಗುರು ಕತ್ತರಿಸುವುದರಿಂದ ಕೈಗೆ ಗಾಯವಾಗಬಹುದು ಅಥವಾ ಮನೆಯೊಳಗೆ ಉಗುರು ಬಿದ್ದು, ಅದು ಆಹಾರ ವಸ್ತುಗಳಿಗೆ ಸೇರಿಕೊಂಡರೂ ಕಾಣಬಹುದು ಎಂಬ ಕಾರಣವಿದೆ.

ಆದರೆ ಧಾರ್ಮಿಕವಾಗಿ ನೋಡುವುದಾದರೆ ಸಂಜೆ ಮನೆಗೆ ಮಹಾಲಕ್ಷ್ಮಿ ಬರುವ ಸಮಯ. ಉಗುರು ವಿಷ ಅಥವಾ ರಾಕ್ಷಸ ಗುಣದ ಸಂಕೇತ. ಮಹಾಲಕ್ಷ್ಮಿ ಮನೆಗೆ ಬರುವ ವೇಳೆ ಮನೆಯಲ್ಲಿ ರಾಕ್ಷಸ ಗುಣದ ಉಗುರು ಕತ್ತರಿಸಿ ಕಸ ಮಾಡಿದರೆ ಶುಭವಲ್ಲ ಎನ್ನುವ ಕಾರಣಕ್ಕೆ ರಾತ್ರಿ ಉಗುರು ಕತ್ತರಿಸಬಾರದು ಎಂಬ ನಂಬಿಕೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ