ದೇಗುಲ ದರ್ಶನ: ಶಿವನ ಆರಾಧಕರು ಈ ದೇವಾಲಯಕ್ಕೆ ತಪ್ಪದೇ ಭೇಟಿ ಕೊಡಿ!

ಶುಕ್ರವಾರ, 9 ಫೆಬ್ರವರಿ 2018 (10:18 IST)
ಬೆಂಗಳೂರು: ಬೆಂಗಳೂರಿನಿಂದ ಅತ್ತಿಬೆಲೆ ಗಡಿ ದಾಟಿ ತಮಿಳುನಾಡು ಕಡೆಗೆ ಸಾಗುವಾಗ ಹೆದ್ದಾರಿಗಿಂತ ಕೊಂಚ ಪಕ್ಕದಲ್ಲೇ ಚಂದ್ರಚೂಡೇಶ್ವರ ದೇವಾಲಯ ಸಿಗುತ್ತದೆ.
 

ಪುರಾತನವಾದ ಈ ದೇವಾಲಯ ಇರುವುದು ಹೊಸೂರು ಬಳಿ, ತಮಿಳುನಾಡಿನ ಕೃಷ್ಣಗಿರಿ ತಾಲೂಕಿನಲ್ಲಿ. ತಮಿಳುನಾಡು ಧಾರ್ಮಿಕ ದತ್ತಿ ಇಲಾಖೆಯ ಆಡಳಿತಕ್ಕೊಳಪಟ್ಟ ದೇವಾಲಯ ಇದಾಗಿದೆ.

ಬೆಟ್ಟವೇರಿ ಸಾಗಿದರೆ ಶಿವ ದೇಗುಲ ಸಿಗುತ್ತದೆ. ಹೊಯ್ಸಳರ ಕಾಲದಲ್ಲೇ ಈ ದೇವಾಲಯ ಅಸ್ಥಿತ್ವದಲ್ಲಿದೆ ಎಂದು ನಂಬಲಾಗಿದೆ. ಅತ್ಯಂತ ಪುರಾತನವಾದ ಈ ದೇವಾಲಯ ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಾಣಗೊಂಡಿದೆ. ಗರ್ಭಗುಡಿಯಲ್ಲಿ ಚಂದ್ರನನ್ನೇ ಆಭರಣವಾಗಿ ಮುಡಿಗೇರಿಸಿಕೊಂಡ ಶಿವ ಲಿಂಗವಿದೆ.

ಇಲ್ಲಿಗೆ ಪ್ರತಿ ನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ. ಬೆಟ್ಟದ ತುದಿಯಲ್ಲಿ ದೇವಾಲಯವಿರುವ ಕಾರಣ ಇಲ್ಲಿಂದ ಬೆಂಗಳೂರು ನಗರದ ವಿಹಂಗಮ ನೋಟ ವೀಕ್ಷಿಸಬಹುದು. ಕಲ್ಲು,  ಬಂಡೆಗಳು ಸೆಲ್ಫೀ ಪ್ರಿಯರಿಗೆ ಇಷ್ಟವಾಗುತ್ತದೆ. ಇಲ್ಲಿ ಪ್ರತಿ ನಿತ್ಯ ಊಟದ ವ್ಯವಸ್ಥೆಯೂ ಇದ್ದು, ಮೊದಲು ಬಂದ 100 ಮಂದಿಗೆ ಭೋಜನ ಲಭ್ಯವಿರುತ್ತದೆ. ಇನ್ನೇನು ಶಿವರಾತ್ರಿ ಬಂತು. ಶಿವ ದೇಗುಲಕ್ಕೆ ಭೇಟಿ ನೀಡುವ ಯೋಜನೆಯಿದ್ದರೆ ಇಲ್ಲಿಗೆ ಬರಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ