ಹನುಮಾನ್ ಚಾಲೀಸದಲ್ಲಿ ಈ ವಾಕ್ಯ ಓದಿದರೆ ಎಂಥಾ ಪರಿಣಾಮವಾಗುತ್ತದೆ ಗೊತ್ತಾ?!

ಗುರುವಾರ, 3 ಜನವರಿ 2019 (09:04 IST)
ಬೆಂಗಳೂರು: ಶನಿ ದೋಷವಿರುವವರು, ಆತ್ಮವಿಶ್ವಾಸದ ಕೊರತೆಯಿದ್ದವರು ಹನುಮಾನ್ ಚಾಲೀಸ್ ಓದಿ ಆಂಜನೇಯನನ್ನು ಆರಾಧಿಸಿದರೆ ಒಳಿತಾಗುವುದು ಎಂಬ ನಂಬಿಕೆಯಿದೆ.


ಹನುಮಾನ ಚಾಲೀಸ ಎನ್ನುವುದು ಪವರ್ ಫುಲ್ ಮಂತ್ರ. ಅದರಲ್ಲೂ ಕೆಲವು ಸಾಲುಗಳನ್ನು ಪದೇ ಪದೇ ಓದುವುರಿಂದ ನಮ್ಮ ಜೀವನದಲ್ಲಿ ಬದಲಾವಣೆಯಾಗುತ್ತದಂತೆ.

‘ರಾಮದೂತ  ಅತುಲಿತ ಬಲಧಾಮ, ಅಂಜನಿ ಪುತ್ರ ಪವನಸುತ ನಾಮ’ ಎನ್ನುವ ಈ ಖ್ಯಾತ ಸಾಲನ್ನು ಪದೇ ಪದೇ ಓದುವುದರಿಂದ ನಮ್ಮಲ್ಲಿ ದೈಹಿಕ ಸಾಮರ್ಥ್ಯದ ಕೊರತೆ ನೀಗಿ ಶಕ್ತಿವಂತರಾಗುತ್ತೇವೆ. ಹಾಗೆಯೇ ‘ಮಹಾವೀರ ವಿಕ್ರಮ ಭಜರಂಗಿ’ ಎನ್ನುವ ವಾಕ್ಯವನ್ನು ಪದೇ ಪದೇ ಭಕ್ತಿಯಿಂದ ಪಠಿಸುವುದರಿಂದ ಬುದ್ಧಿವಂತರಾಗುತ್ತಾರೆ.

ಹಾಗೆಯೇ ‘ಭೀಮ್ ರೂಪಿ ಧಾರೀ ಅಸುರ್ ಸಂಹಾರೆ, ರಾಮಚಂದ್ರಜೀ ಕೇ ಕಾಜ್ ಸಂವಾರೆ’ ಎನ್ನುವ ವಾಕ್ಯವನ್ನು ಓದುವುದರಿಂದ ಶತ್ರುನಾಶವಾಗುತ್ತದೆ. ‘ಲಾಯ್ ಸಂಜೀವನ್ ಲಖನ್ ಜಿಯಾಯೆ, ಶ್ರೀರಘುಬೀರ್ ಹರಷಿ ಉರ್ ಲಾಯೆ’ ಎಂಬುದನ್ನು ಪದೇ ಪದೇ ಹೇಳುವುದರಿಂದ ಅನಾರೋಗ್ಯ ದೂರವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ