ಬೆಂಗಳೂರು: ಧರ್ಮವನ್ನು ಹೆಚ್ಚು ನಂಬುವವರು ಶನಿವಾರಗಳಂದು ತಲೆ ಕೂದಲು ಕತ್ತರಿಸುವುದ, ಉಗುರು ಕತ್ತರಿಸುವುದು ಮಾಡುವುದಿಲ್ಲ. ಇದಕ್ಕೆ ಕಾರಣವೇನು ಗೊತ್ತಾ?
ಈ ದಿನ ಶನಿ ಗ್ರಹದ ಪ್ರಭಾವ ಹೆಚ್ಚಿರುವ ದಿನ, ಕಲಿಯುಗದಲ್ಲಿ ಶನಿ ಹೆಚ್ಚು ಪ್ರಭಾವಶಾಲಿ. ಈ ದಿನ ಕೂದಲು ಕತ್ತರಿಸುವುದರಿಂದ ಶನಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ನಂಬಿಕೆಯಿದೆ.
ಶನಿಯ ಕೋಪಕ್ಕೆ ಗುರಿಯಾದರೆ ಧನ ಹಾನಿ, ಶತ್ರು ಬಾಧೆ, ದೈಹಿಕ, ಮಾನಸಿಕ ಕಷ್ಟಗಳು, ಇಷ್ಟ ಮಿತ್ರರಿಂದ ದೂರವಾಗುವಂತಹ ಕೆಟ್ಟ ಪ್ರಭಾವ ನಮ್ಮ ಮೇಲಾಗುತ್ತದೆ ಎಂಬ ನಂಬಿಕೆಯಿಂದಾಗಿ ಶನಿವಾರ ಕೂದಲು ಕತ್ತರಿಸುವುದನ್ನು ಶಾಸ್ತ್ರದಲ್ಲಿ ನಿಷೇದಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ