ಸರ್ಜಿಕಲ್ ಸ್ಟ್ರೈಕ್ ದಿನ ಇಡೀ ರಾತ್ರಿ ನಿದ್ರೆಗೆಟ್ಟಿದ್ದ ಪ್ರಧಾನಿ ಮೋದಿ ಟ್ರೋಲ್ ಮಾಡಿದ ನಟಿ ಸ್ವರ ಭಾಸ್ಕರ್

ಗುರುವಾರ, 28 ಫೆಬ್ರವರಿ 2019 (09:17 IST)
ಮುಂಬೈ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ರಾತ್ರಿ ಭಾರತದ ಪ್ರಧಾನಿ ನರೇಂದ್ರ ಮೋದಿ ಇಡೀ ರಾತ್ರಿ ಎಚ್ಚರವಿದ್ದರು ಎಂಬ ವರದಿಯನ್ನು ಓದಿ ನಟಿ ಸ್ವರ ಭಾಸ್ಕರ್ ಟ್ರೋಲ್ ಮಾಡಲು ಹೋಗಿ ತಾವೇ ಮಂಗಳಾರತಿ ಮಾಡಿಸಿಕೊಂಡಿದ್ದಾರೆ.


‘ಇಡೀ ರಾತ್ರಿ ಎದ್ದಿದ್ದಿರಾ? ಯಾಕೆ ಕೆಲಸ ಇರ್ಲಿಲ್ವಾ? ಇದಕ್ಕೆ ಬೇರೆ ಅಂಕ ಸಿಗಬೇಕಿದೆ’ ಎಂದು ಸ್ವರ ಭಾಸ್ಕರ್ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡಿದ್ದರು. ಇದಕ್ಕೆ ಟ್ವಿಟರಿಗರು ಸರಿಯಾಗಿಯೇ ಬೆಂಡೆತ್ತಿದ್ದಾರೆ.

ಬಹುಶಃ ನಿಮಗೆ ನಿನ್ನೆ ರಾತ್ರಿಯ ನಶೆ ಇಳಿದಿರಲಿಕ್ಕಿಲ್ಲ ಎಂದು ಕೆಲವರು ಹೇಳಿದರೆ ಇನ್ನು, ಕೆಲವರು ನೀವು 18 ಗಂಟೆ ಕೆಲಸ ಮಾಡ್ತೀರಾ? ಇಲ್ಲ, ಯಾಕೆಂದರೆ ನಿಮಗೆ ಕೆಲಸವೇ ಇಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ. ನಿಮ್ಮಂತಹ ಅಸಹಿಷ್ಣುತೆಗೆ ಕೊನೆಯೇ ಇಲ್ಲ ಎಂದು ಇನ್ನು ಕೆಲವರು ಸ್ವರ ಭಾಸ್ಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ