ಅಮೀರ್ ನಿಜವಾಗಿ ಕ್ಷಮೆ ಕೇಳಿದ್ರಾ? ಇನ್ ಸ್ಟಾಗ್ರಾಂ ಹ್ಯಾಕ್ ಆಗಿತ್ತಾ ಎನ್ನೋದೇ ಈಗ ಫ್ಯಾನ್ಸ್ ಗೆ ಅನುಮಾನ

ಗುರುವಾರ, 1 ಸೆಪ್ಟಂಬರ್ 2022 (16:19 IST)
ಮುಂಬೈ: ಅಮೀರ್ ಖಾನ್ ಲಾಲ್ ಸಿಂಗ್ ಛಡ್ಡಾ ಸೋಲಿನ ಬೆನ್ನಲ್ಲೇ ಕ್ಷಮೆ ಕೇಳಿದ್ದಾರೆಂಬ ವಿಡಿಯೋ ವೈರಲ್ ಆಗಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ಇದು ಡಿಲೀಟ್ ಕೂಡಾ ಆಗಿದೆ. ಇದರ ಬೆನ್ನಲ್ಲೇ ಈ ಕ್ಷಮೆ ನಿಜವಾಗಿಯೂ ಅಮೀರ್ ಕೇಳಿದ್ದರೇ ಇಲ್ಲವರೇ ಅವರ ಖಾತೆ ಹ್ಯಾಕ್ ಆಗಿತ್ತಾ ಎನ್ನುವ ಅನುಮಾನ ಫ್ಯಾನ್ಸ್ ಗೆ ಶುರುವಾಗಿದೆ.

ಅಮೀರ್ ಖಾನ್ ಪ್ರೊಡಕ್ಷನ್ಸ್  ನ ಅಧಿಕೃತ ಇನ್ ‍ಸ್ಟಾಗ್ರಾಂ ಖಾತೆಯಿಂದ ‘ನಮ್ಮ ಕೆಲಸದಿಂದ, ಮಾತನಾಡುವ ಪದಗಳಿಂದ, ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪಾಗಿದ್ದರೆ ಕ್ಷಮೆಯಿರಲಿ’ ಎಂದು ಸಂದೇಶ ಬರೆಯಲಾಗಿತ್ತು. ಇದು ಭಾರೀ ವೈರಲ್ ಆಗಿತ್ತು.

ಆದರೆ ಈ ಸಂದೇಶ ವೈರಲ್ ಆಗುತ್ತಿದ್ದಂತೇ ಸಂದೇಶ ಡಿಲೀಟ್ ಆಗಿದೆ. ಹೀಗಾಗಿ ಅಮೀರ್ ಖಾತೆ ಹ್ಯಾಕ್ ಆಗಿತ್ತೇ ಎನ್ನುವ ಅನುಮಾನ ನೆಟ್ಟಿಗರಿಗೆ ಕಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ